ಉತ್ತರ ಪ್ರದೇಶ ಸರ್ಕಾರದಿಂದ ನವ ವಿವಾಹಿತರಿಗೆ ಕಾಂಡೋಮ್ ಉಡುಗೊರೆ

ಯೋಗಿ ಆದಿತ್ಯನಾಥ ನೇತೃತ್ವದ ಉತ್ತರಪ್ರದೇಶದ ಬಿಜೆಪಿ ಸರ್ಕಾರ ಕುಟುಂಬಯೋಜನೆಯ ಸಂದೇಶ ಸಾರುವ ಉದ್ದೇಶದಿಂದ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಲಖನೌ: ಯೋಗಿ ಆದಿತ್ಯನಾಥ ನೇತೃತ್ವದ ಉತ್ತರಪ್ರದೇಶದ ಬಿಜೆಪಿ ಸರ್ಕಾರ ಕುಟುಂಬಯೋಜನೆಯ ಸಂದೇಶ ಸಾರುವ ಉದ್ದೇಶದಿಂದ ನವ ದಂಪತಿಗೆ ಕಾಂಡೋಮ್ ಒಳಗೊಂಡ ಕಿಟ್ ಉಡುಗೊರೆ ನೀಡಲು ಮುಂದಾಗಿದೆ.
ಉತ್ತರ ಪ್ರದೇಶ ಸರ್ಕಾರ ಮಿಷನ್ ಪರಿವಾರ್ ವಿಕಾಸ್ ಯೋಜನೆಯಡಿ ವಿಶ್ವ ಜನಸಂಖ್ಯಾ ದಿನವಾದ ಜುಲೈ 11ರಂದು ಕಾಂಡೋಮ್ ಒಳಗೊಂಡ ಕಿಟ್ ನೀಡುವ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಯೋಜನೆಯ ವ್ಯವಸ್ಥಾಪಕರ ಹೇಳಿಕೆ ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕಿಟ್‌ನಲ್ಲಿ ಕಾಂಡೋಮ್ ಮಾತ್ರವಲ್ಲದೆ ಗರ್ಭನಿರೋಧಕ ಗುಳಿಗೆಗಳು, ಸೌಂದರ್ಯವರ್ಧಕ ಸಾಧನಗಳು ಇರಲಿವೆ. ಕುಟುಂಬಯೋಜನೆಯ ಮಹತ್ವ ಸಾರುವ ಸಂದೇಶವುಳ್ಳ ಕಾಗದಪತ್ರವೊಂದು ಕಿಟ್‌ ಜತೆ ಇರಲಿದೆ. ಆಶಾ ಕಾರ್ಯಕರ್ತೆಯರು ಈ ಕಿಟ್‌ಗಳನ್ನು ವಿತರಿಸಲಿದ್ದಾರೆ.
‘ವೈವಾಹಿಕ ಜೀವನದ ಜವಾಬ್ದಾರಿಗಳ ಬಗ್ಗೆ ನವವಿವಾಹಿತರಲ್ಲಿ ಅರಿವು ಮೂಡಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ’ ಎಂದು ‘ಮಿಷನ್ ಪರಿವಾರ್ ವಿಕಾಸ್’ ಯೋಜನೆಯ ಯೋಜನಾ ವ್ಯವಸ್ಥಾಪಕ ಅವನೀಶ್ ಸಕ್ಸೇನಾ ತಿಳಿಸಿದ್ದಾರೆ. ನವವಿವಾಹಿತರ ಬಳಕೆಗೆ ಅಗತ್ಯವಾದ ಕನ್ನಡಿ, ಬಾಚಣಿಗೆ ಮತ್ತಿತರ ಸೌಂದರ್ಯವರ್ಧಕ ಸಾಧನಗಳೂ ಕಿಟ್‌ನಲ್ಲಿ ಇರಲಿವೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com