ರಾಮ ಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಕೆಂಪು ಕಲ್ಲುಗಳನ್ನು ಸಂಗ್ರಹ ಮಾಡಿಲಾಗುತ್ತಿದೆ. ಕೆಂಪು ಕಲ್ಲುಗಳನ್ನು ಅಯೋಧ್ಯೆಯಲ್ಲಿ ಸಂಗ್ರಹಿಸಡಲಾಗುತ್ತಿದ್ದು, ಈ ಹಿಂದೆ ಕೂಡ ಕಲ್ಲುಗಳನ್ನು ತರಲಾಗಿತ್ತು. ಇದೀಗ ಮತ್ತೆ ಮೂರು ಟ್ರಕ್ ಗಳ ಮೂಲಕ ಕಲ್ಲುಗಳನ್ನು ತರಲಾಗಿದೆ. ಅಖಿಲೇಖ್ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಕಲ್ಲುಗಳನ್ನು ತರುವುದಕ್ಕೆ ನಿಷೇಧ ಹೇರಿದ್ದರು ಎಂದು ವಿಹೆಚ್ ಪಿ ಪ್ರತಿನಿಧಿ ಪ್ರಕಾಶ್ ಕುಮಾರ್ ಗುಪ್ತಾ ಅವರು ಹೇಳಿದ್ದಾರೆ.