ಜಮ್ಮು-ಕಾಶ್ಮೀರ: 2 ದಿನಗಳ ಬಳಿಕ ಇಂಟರ್ನೆಟ್ ಸೇವೆ ಪುನರ್ ಆರಂಭ
ಬುರ್ಹಾನ್ ವಾನಿ ಸಾವಿನ ವರ್ಷಾಚರಣೆ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದೆರಡು ದಿನಗಳಿಂದ ಸಂಪೂರ್ಣವಾಗಿ ಅಮಾನತುಗೊಳಿಸಲಾಗಿದ್ದ ಇಂಟರ್ ನೆಟ್ ಸೇವೆಯನ್ನು ಭಾನುವಾರದಿಂದ...
ಶ್ರೀನಗರ: ಬುರ್ಹಾನ್ ವಾನಿ ಸಾವಿನ ವರ್ಷಾಚರಣೆ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದೆರಡು ದಿನಗಳಿಂದ ಸಂಪೂರ್ಣವಾಗಿ ಅಮಾನತುಗೊಳಿಸಲಾಗಿದ್ದ ಇಂಟರ್ ನೆಟ್ ಸೇವೆಯನ್ನು ಭಾನುವಾರದಿಂದ ಪುನರ್ ಆರಂಭವಾಗಿದೆ.
ಕಳೆದೆರಡು ದಿನಗಳಿಂದ ಇಂಟರ್ ನೆಟ್ ಸೇವೆಗಳನ್ನು ಅಮಾನತು ಮಾಡಲಾಗಿತ್ತು. ಸಮಾಜ ವಿರೋಧಿ ಶಕ್ತಿಗಳನ್ನು ಈ ಸೌಕರ್ಯವನ್ನು ದುರುಪಯೋಗಿಸಿ ವದಂತಿ ಹರಡುವಿಕೆಗೆ ಮತ್ತು ವಿಧ್ವಂಸಕ ಕೃತ್ಯಗಳಿಗೆ ಬಳಸಬಹುದೆಂಬ ಶಂಕೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿತ್ತು.
ಕಾಶ್ಮೀರದಲ್ಲಿ ಮೊಬೈಲ್ ಹಾಗೂ ಬ್ರಾಡ್ ಬ್ಯಾಂಡ್ ಇಂಟರ್ ಸೇವೆಗಳನ್ನು ಪುನರ್ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಮೊಬೈಲ್ ಗಳಲ್ಲಿ 2ಜಿ ಸೇವೆಗಳನ್ನು ನೀಡಲಾಗಿದೆ. ಹೈ ಸ್ಪೀಡ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿ ಅವಲೋಕಿಸಿ ಹೈಸ್ಪೀಡ್ ಇಂಟರ್ನೆಟ್ ಸೇವೆಗಳನ್ನು ಪುನರ್ ಆರಂಭಿಸಲಾಗುತ್ತದೆ ಎಂದಿದ್ದಾರೆ.