ಮಾನವ ಗುರಾಣಿ ಪ್ರಕರಣ: ಸಂತ್ರಸ್ತನಿಗೆ 10 ಲಕ್ಷ ಪರಿಹಾರ ನೀಡುವಂತೆ ಮಾನವ ಹಕ್ಕು ಆಯೋಗ ಆದೇಶ!

ಕಲ್ಲು ತೂರಾಟಗಾರರ ಹಣಿಯಲು ಕಲ್ಲು ತೂರಾಟಗಾರರ ನಾಯಕನನ್ನು ಸೇನಾ ವಾಹನಕ್ಕೆ ಗುರಾಣಿಯಾಗಿ ಕಟ್ಟಿದ ಪ್ರಕರಣ ಸಂಬಂಧ ಸಂತ್ರಸ್ತ ವ್ಯಕ್ತಿಗೆ 10 ಲಕ್ಷ ಪರಿಹಾರ ನೀಡಬೇಕು ಎಂದು ಕಾಶ್ಮೀರ ಮಾನವ ಹಕ್ಕು ಆಯೋಗದ ಸಮಿತಿ ತೀರ್ಪು ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಕಲ್ಲು ತೂರಾಟಗಾರರ ಹಣಿಯಲು ಕಲ್ಲು ತೂರಾಟಗಾರರ ನಾಯಕನನ್ನು ಸೇನಾ ವಾಹನಕ್ಕೆ ಗುರಾಣಿಯಾಗಿ ಕಟ್ಟಿದ ಪ್ರಕರಣ ಸಂಬಂಧ ಸಂತ್ರಸ್ತ ವ್ಯಕ್ತಿಗೆ 10 ಲಕ್ಷ ಪರಿಹಾರ ನೀಡಬೇಕು ಎಂದು ಕಾಶ್ಮೀರ ಮಾನವ ಹಕ್ಕು  ಆಯೋಗದ ಸಮಿತಿ ತೀರ್ಪು ನೀಡಿದೆ.

ಈ ಬಗ್ಗೆ ಸೋಮವಾರ ಆದೇಶ ನೀಡಿರುವ ಆಯೋಗದ ಸಮಿತಿ ಸದಸ್ಯರು, ಮನುಷ್ಯರಾಗಿ ಇಂತಹ ಹೀನ ಕೃತ್ಯಗಳನ್ನು ಸಹಿಸಲಸಾಧ್ಯ ಎಂದು ಆಯೋಗ ಸದಸ್ಯರು ಹೇಳಿದ್ದಾರೆ. "ಕಾಶ್ಮೀರ ಪೊಲೀಸರು ಆರೋಪಿ ಫರೂಕ್ ಅಹ್ಮದ್  ದಾರ್ ನನ್ನು ಸೇನಾವಾಹನಕ್ಕೆ ಕಟ್ಟಿರುವ ಕುರಿತು ತಪ್ಪೊಪಿಗೆ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಶಾಂತಿ ಸುವ್ಯವಸ್ಥೆ ರಕ್ಷಣೆಗೆ ಹಲವು ಕಾನೂನುಗಳಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲೂ ಇಂತಹ ಕೃತ್ಯಗಳಿಗೆ ಕಾನೂನು ನೆರವು ನಾಗರಿಕ  ಸಮಾಜದಲ್ಲಿ ಆರೋಪಿಯನ್ನು ಹೀಗೆ ಹೀನಾಯವಾಗಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಮಾನವ ಹಕ್ಕು ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಬಿಲಾಲ್ ನಜ್ಕಿ ಹೇಳಿದ್ದಾರೆ.

ಪ್ರಜೆಗಳ ಜೀವನ ಮತ್ತು ಸ್ವಾತಂತ್ರ್ಯ ರಕ್ಷಣೆಯು ಸರ್ಕಾರಗಳ ಆದ್ಯ ಕರ್ತವ್ಯವಾಗಿರುತ್ತದೆ ಎಂದು ಹೇಳಿರುವ ಆಯೋಗ, ಕೂಡಲೇ ಕಾಶ್ಮೀರ ಸರ್ಕಾರ ಆರೋಪಿ ಫರೂಕ್ ಅಹ್ಮದ್ ದಾರ್ ಗೆ 10 ಲಕ್ಷ ಪರಿಹಾರ ನೀಡಬೇಕು ಎಂದು  ಆದೇಶಿಸಿದ್ದಾರೆ.

ಕಳೆದ ಏಪ್ರಿಲ್ 9ರಂದು ಕಾಶ್ಮೀರದಲ್ಲಿ ಭುಗಿಲೆದ್ದಿದ್ದ ವ್ಯಾಪಕ ಹಿಂಸಾಚಾರ ಮತ್ತು ಕಲ್ಲು ತೂರಾಟ ನಿಗ್ರಹಕ್ಕಾಗಿ ಸೇನಾ ಯೋಧ ಮೇಜರ್ ನಿತಿನ್ ಗಗೋಯ್ ಅವರು, ಕಲ್ಲು ತೂರಾಟಗಾರರ ನಾಯಕ ರೂಕ್ ಅಹ್ಮದ್ ದಾರ್ ನನ್ನು  ಸೇನಾವಾಹನಕ್ಕೆ ಕಟ್ಟಿ ಮಾನವ ಗುರಾಣಿಯಾಗಿ ಬಳಕೆ ಮಾಡಿದ್ದರು. ಈ ವಿಚಾರ ದೇಶಾದ್ಯಂತ ವ್ಯಾಪಕ ವೈರಲ್ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com