ಪಶ್ಚಿಮ ಬಂಗಾಳ ಕೋಮು ಗಲಭೆ: ಗುಜರಾತ್ ರೀತಿ ಹಿಂಸಾಚಾರಕ್ಕೆ ಬಿಜೆಪಿ ಶಾಸಕ ಕರೆ

ಕೋಮು ಗಲಭೆಯಿಂದಾಗಿ ಈಗಾಗಲೇ ಪಶ್ಚಿಮ ಬಂಗಾಳ ಹೊತ್ತಿ ಉರಿಯುತ್ತಿದ್ದು, ಇದರ ನಡುವೆಯೇ 2002 ಗುಜರಾತ್ ರಾಜ್ಯಲ್ಲಿ ಪ್ರತಿಕ್ರಿಯಿಸಿದಂತೆ ಪಶ್ಚಿಮ ಬಂಗಾಳದಲ್ಲೂ ಪ್ರತಿಕ್ರಿಯೆ ನೀಡುವಂತೆ ಬಿಜೆಪಿ ಶಾಸರೊಬ್ಬರೊಬ್ಬರು ಕರೆ ನೀಡಿದ್ದಾರೆ...
ಬಿಜೆಪಿ ಶಾಸಕ ಹೆಚ್. ರಾಜಾ ಸಿಂಗ್
ಬಿಜೆಪಿ ಶಾಸಕ ಹೆಚ್. ರಾಜಾ ಸಿಂಗ್
ನವದೆಹಲಿ: ಕೋಮು ಗಲಭೆಯಿಂದಾಗಿ ಈಗಾಗಲೇ ಪಶ್ಚಿಮ ಬಂಗಾಳ ಹೊತ್ತಿ ಉರಿಯುತ್ತಿದ್ದು, ಇದರ ನಡುವೆಯೇ 2002 ಗುಜರಾತ್ ರಾಜ್ಯಲ್ಲಿ ಪ್ರತಿಕ್ರಿಯಿಸಿದಂತೆ ಪಶ್ಚಿಮ ಬಂಗಾಳದಲ್ಲೂ ಪ್ರತಿಕ್ರಿಯೆ ನೀಡುವಂತೆ ಬಿಜೆಪಿ ಶಾಸರೊಬ್ಬರೊಬ್ಬರು ಕರೆ ನೀಡಿದ್ದಾರೆ. 
ಬದುರಿಯಾ ಮತ್ತು ಬಸೀರ್ಹತ್ ಜಿಲ್ಲೆಗಳಲ್ಲಿ ಕೋಮು ಉದ್ವಿಗ್ನತೆ ತೀವ್ರಗೊಂಡಿರುವ ನಡುವೆ, ಹಿಂದೂ ಸಮುದಾಯ ಹೆಚ್ಚು ಪ್ರಬಲವಾಗಿ ಪ್ರತಿಕ್ರಿಯಿಸಬೇಕು ಎಂದು ಬಿಜೆಪಿ ಶಾಸಕ ಹೆಚ್. ರಾಜಾ ಸಿಂಗ್ ಬಹಿರಂಗವಾಗಿಯೇ ಪ್ರತಿಪಾದಿಸುತ್ತಿರುವುದು ಕಂಡು ಬಂದಿದೆ. 
2002ರಲ್ಲಿ ಗುಜರಾತ್ ನಲ್ಲಿ ಪ್ರತಿಕ್ರಿಯಿಸಿದಂತೆ ಹಿಂದೂ ಸಮುದಾಯ ಪ್ರತಿರೋಧ ಪ್ರದರ್ಶಿಸಬೇಕೆಂದು ಹೈದರಾಬಾದ್ ನ ಬಿಜೆಪಿ ಶಾಸಕ ಎಚ್.ರಾಜಾ ಕರೆ ನೀಡಿದ್ದಾರೆ.
ಈ ಕುರಿತು ವಿಡಿಯೋ ಸಂದೇಶ ಪ್ರಕಟಿಸಿರುವ ರಾಜಾ, ಬಂಗಾಳದ ಹುಲಿಗಳು ಎಚ್ಚರಗೊಳ್ಳಬೇಕು ಮತ್ತು ತಮ್ಮ ಸಮುದಾಯದ ರಕ್ಷಣೆಗೆ ಒಂದಾಗಬೇಕು ಎಂದು ಹೇಳಿದ್ದಾರೆ. 
ಮತ್ತೊಂಡೆಯಲ್ಲಿ ಬಿಜೆಪಿ ವಕ್ತಾರ ನೂಪುರ್ ಶರ್ಮಾ, 2002ರ ಗುಜರಾತ್ ಗಲಭೆಯ ಫೋಟೋ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿ, ಪಶ್ಚಿಮ ಬಂಗಾಳದಲ್ಲಿನ ಹಿಂಸಾಚಾರದ ವಿರುದ್ಧ ಜಂತರ್ ಮಂತರ್ ನಲ್ಲಿ ತಮ್ಮ ಪ್ರತಿಭಟನೆಯಲ್ಲಿ ಕೈಜೋಡಿಸುವಂತೆ ಕರೆ ನೀಡಿದ್ದಾರೆ. ಬಿಜೆಪಿ ನಾಯಕರ ಹೇಳಿಕೆಗಳ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com