ಅಮರನಾಥ ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಿದ್ದು ಎಲ್ಇಟಿ ಉಗ್ರರು: ಜಮ್ಮು-ಕಾಶ್ಮೀರ ಪೊಲೀಸ್

ಅಮರನಾಥ ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಿದ್ದು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕರು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ಹೇಳಿದ್ದಾರೆ...
ದಾಳಿ ನಡೆದ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ
ದಾಳಿ ನಡೆದ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ
ನವದೆಹಲಿ: ಅಮರನಾಥ ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಿದ್ದು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕರು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ಹೇಳಿದ್ದಾರೆ. 
ದಾಳಿ ಕುರಿತಂತೆ ಮಾಹಿತಿ ನೀಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವಕ್ತಾರ, ಲಷ್ಕರ್-ಇ-ತೊಯ್ಬಾ ಸಂಘಟನೆಯ 4-5 ಉಗ್ರರ ತಂಡ ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಿದ್ದರು. ದಾಳಿಕೋರರಲ್ಲಿ ಓರ್ವ ಉಗ್ರನನ್ನು ಇಸ್ಮಾಯಿಲ್ ಎಂದು ಗುರ್ತಿಸಲಾಗಿದೆ ಎಂದು ಹೇಳಿದ್ದಾರೆ. 
ಅಮರನಾಥನ ದರ್ಶನ ಪಡೆದುಕೊಂಡ ಗುಜರಾತ್ ಯಾತ್ರಿಕರು ಸೋನ್ ಮಾರ್ಗ್ ನಿಂದ ಬಸ್ಸಲ್ಲಿ (ಜಿಜೆ09ಝಡ್9976) ವಾಪಸಾಗುತ್ತಿದ್ದು. ಈ ವೇಳೆ ಸುಮಾರು ದ್ವಿಚಕ್ರ ವಾಹನದಲ್ಲಿ ಬಂದಿರುವ ಉಗ್ರರು ಬೈಕ್ ನಲ್ಲಿ ಆಗಮಿಸಿ ಮೊದಲು ಬೊಟೆಂಗೂನಲ್ಲಿನ ಬುಲೆಟ್ ಪ್ರೂಫ್ ಬಂಕರ್ ಮೇಲೆ ದಾಳಿ ನಡೆಸಿದ್ದಾರೆ. ಆದರೆ, ಪ್ರತಿದಾಳಿಗೆ ಅಂಜಿ ಪರಾರಿಯಾಗಿದ್ದಾರೆ. 
ನಂತರ ಅವರಿಗೆ ಪೊಲೀಸ್ ಜೀಪು ಖಾನ್ನಾಬಾಲ್ ಎಂಬಲ್ಲಿ ಎದುರಾಗಿದ್ದು, ಅದರ ಮೇಲೂ ಗುಂಡಿನ ದಾಳಿ ನಡೆಸಿದ್ದಾರೆ. ಆದರೆ, ಪೊಲೀಸರು ಪ್ರತಿಯಾಗಿ ದಾಳಿ ಮಾಡಿದ್ದಾರೆ. ನಂತರ ಉಗ್ರರಿಗೆ ಅಮರನಾಥ ಯಾತ್ರಾರ್ಥಿಕರಿದ್ದ ಗುಜರಾತ್ ನೋಂದಣಿಯ ಬಸ್ಸು ರಾತ್ರಿ 8.30ರ ಸುಮಾರಿಗೆ ಎದುರು ಸಿಕ್ಕಿದೆ. ಈ ವೇಳೆ ಬಸ್ಸಿನ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆಂದು ತಿಳಿಸಿದ್ದಾರೆ. 
ದಾಳಿಗೆ ಇದೀಗ ವಿಶ್ವ ಹಿಂದೂ ಪರಿಷತ್ (ವಿಹೆಚ್'ಪಿ), ಜಮ್ಮುಮತ್ತು ಕಾಶ್ಮೀರ ನ್ಯಾಷನರ್ ಪ್ಯಾಂಥರ್ಸ್ ಪಾರ್ಟಿ, ನ್ಯಾಷನಸ್ ಕಾನ್ಫರೆನ್ಸ್ ಮತ್ತ ಕಾಂಗ್ರೆಸ್ ಪಕ್ಷ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಬಂದ್ ಗೆ ಕರೆ ನೀಡಿವೆ. 
ಈ ನಡುವೆ ಪರಿಸ್ಥಿತಿಯನ್ನು ಅವಲೋಕನ ನಡೆಸಲು ಕೇಂದ್ರ ಗೃಹ ಸಚಿಚ ರಾಜನಾಥ್ ಸಿಂಗ್ ಅವರು ಉನ್ನತ ಮಟ್ಟದ ತುರ್ತು ಸಭೆಯನ್ನು ಕರೆದಿದ್ದಾರೆ. 
ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಗೃಹ ಸಚಿವಾಲಯ ಉನ್ನತಾಧಿಕಾರಿಗಳು, ಗುಪ್ತಚರ ಹಾಗೂ ಅರೆಸೇನಾ ಪಡೆಯ ಅಧಿಕಾರಿಗಳು ಹಾಜರಿದ್ದು, ಪರಿಸ್ಥಿತಿ ಕುರಿತಂತೆ ಮಾತುಕತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ದಾಳಿ ಹಿನ್ನಲೆಯಲ್ಲಿ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಹನ್ಸ್ ರಾಜ್ ಅಹಿರ್ ನೇತೃತ್ವದಲ್ಲಿ ಉನ್ನತ ಮಟ್ಟದ ಕೇಂದ್ರೀಯ ತಂಡ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದು, ಪರಿಸ್ಥಿತಿಯನ್ನು ಅವಲೋಕನೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಸಿಆರ್ ಪಿಎಫ್ ಡಿಜಿ ಆರ್.ಆರ್. ಭಟ್ ನಗರ್ ಅವರು ಶ್ರೀನಗರಕ್ಕೆ ಭೇಟಿ ನೀಡಿದ್ದು ಪರಿಸ್ಥಿತಿ ಅವಲೋಕಿಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com