ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಎದುರಿಸಲು ಗೋರಕ್ಷಕರನ್ನು ಕಳಿಸಿ: ಬಿಜೆಪಿಗೆ ಶಿವಸೇನೆ ಟಾಂಗ್

ಅಮರನಾಥಯಾತ್ರೆಯ ಯಾತ್ರಿಕರ ಮೇಲೆ ಭಯೋತ್ಪಾದಕ ದಾಳಿ ನಡೆದಿರುವುದರ ಬಗ್ಗೆ ಶಿವಸೇನೆ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಎದುರಿಸಲು ಮೋದಿ ಸರ್ಕಾರ...
ಉದ್ಧವ್ ಠಾಕ್ರೆ, ನರೇಂದ್ರ ಮೋದಿ
ಉದ್ಧವ್ ಠಾಕ್ರೆ, ನರೇಂದ್ರ ಮೋದಿ
ಮುಂಬೈ: ಅಮರನಾಥಯಾತ್ರೆಯ ಯಾತ್ರಿಕರ ಮೇಲೆ ಭಯೋತ್ಪಾದಕ ದಾಳಿ ನಡೆದಿರುವುದರ ಬಗ್ಗೆ ಶಿವಸೇನೆ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಎದುರಿಸಲು ಮೋದಿ ಸರ್ಕಾರ ಗೋರಕ್ಷಕರನ್ನು ಕಳಿಸಲಿ ಎಂದು ಹೇಳಿದೆ. 
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದು, ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರನ್ನು ಎದುರಿಸಲು ಗೋರಕ್ಷಕರನ್ನು ಕಳಿಸುವಂತೆ ಸಲಹೆ ನೀಡಿದ್ದಾರೆ. ಜು.10 ರಂದು ರಾತ್ರಿ 8:30 ರ ವೇಳೆಯಲ್ಲಿ ಭಯೋತ್ಪಾದಕರ ದಾಳಿ ನಡೆದಿತ್ತು. 
ಸಂಸ್ಕೃತಿ ಮತ್ತು ಕ್ರೀಡೆಯನ್ನು ಜೊತೆಯಾಗಿ ತರಬೇಡಿ ಎಂದು ಬಿಜೆಪಿ ಹೇಳಿತ್ತು ಆದರೆ ಇಂದು ಭಯೋತ್ಪಾದಕ ದಾಳಿಯ ರೂಪದಲ್ಲಿ ಧರ್ಮ ಮತ್ತು ರಾಜಕೀಯ ಒಟ್ಟಿಗೆ ಬಂದಿವೆ, ಶಸ್ತ್ರಗಳ ಜೊತೆಗೆ ಒಂದು ವೇಳೆ ಆ ಉಗ್ರರು ಬ್ಯಾಗ್ ಗಳಲ್ಲಿ ಗೋಮಾಂಸ ತಂದಿದ್ದರೆ ಯಾರೂ ಉಳಿಯುತ್ತಿರಲಿಲ್ಲ ಎಂದು ತಿಳಿದುಕೊಳ್ಳಬೇಕೇ? ಕೇಂದ್ರ ಸರ್ಕಾರ ಭಯೋತ್ಪಾದಕರನ್ನು ಎದುರಿಸಲು ಗೋರಕ್ಷಕರನ್ನೇಕೆ ಕಳಿಸಬಾರದು ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com