ಗ್ಯಾಂಗ್'ಸ್ಟರ್ ಆನಂದ್ ಪಾಲ್ ಸಿಂಗ್ ಎನ್'ಕೌಂಟರ್: ರಾಜಸ್ತಾನದಲ್ಲಿ ಘರ್ಷಣೆ, 16 ಜನರಿಗೆ ಗಾಯ

ಕುಖ್ಯಾತ ಗ್ಯಾಂಗ್'ಸ್ಟರ್ ಆನಂದ್ ಪಾಲ್ ಸಿಂಗ್ ಎನ್ ಕೌಂಟರ್ ಪ್ರಕರಣ ಸಂಬಂಧ ಇದೀಗ ರಾಜಸ್ತಾನದಲ್ಲಿ ಘರ್ಷಣೆಗೆ ದಾರಿ ಮಾಡಿಕೊಟ್ಟಿದ್ದು, ಘರ್ಷಣೆಯಲ್ಲಿ 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ...
ಕುಖ್ಯಾತ ಗ್ಯಾಂಗ್'ಸ್ಟರ್ ಆನಂದ್ ಪಾಲ್ ಸಿಂಗ್
ಕುಖ್ಯಾತ ಗ್ಯಾಂಗ್'ಸ್ಟರ್ ಆನಂದ್ ಪಾಲ್ ಸಿಂಗ್
Updated on: 
ಜೈಪುರ: ಕುಖ್ಯಾತ ಗ್ಯಾಂಗ್'ಸ್ಟರ್ ಆನಂದ್ ಪಾಲ್ ಸಿಂಗ್ ಎನ್ ಕೌಂಟರ್ ಪ್ರಕರಣ ಸಂಬಂಧ ಇದೀಗ ರಾಜಸ್ತಾನದಲ್ಲಿ ಘರ್ಷಣೆಗೆ ದಾರಿ ಮಾಡಿಕೊಟ್ಟಿದ್ದು, ಘರ್ಷಣೆಯಲ್ಲಿ 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ. 
ಆನಂತ್ ಪಾಲ್ ಸಿಂಗ್ ಎನ್'ಕೌಂಟರ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ರಜ್'ಪೂತ್ ಸಮುದಾಯ ಪ್ರತಿಭಟನೆ ನಡೆಸುತ್ತಿತ್ತು. ಈ ವೇಳೆ ಘರ್ಷಣೆ ಏರ್ಪಟ್ಟಿದ್ದು, 16 ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. 
ರಾಜಸ್ತಾನದ ನಾಗ್ಪುರ ಜಿಲ್ಲೆಯಲ್ಲಿ ನಿನ್ನೆ ಪ್ರತಿಭಟನೆಯನ್ನು ನಡೆಸಲಾಗುತ್ತಿತ್ತು. ಈ ವೇಳೆ ಪ್ರತಿಭಟನಾಗಾರರು ಭದ್ರತೆ ನೀಡುದ್ದ ಪೊಲೀಸರ ಮೇಲೆಯೇ ಕಲ್ಲು ತೂರಾಡಟ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿಗೆ ಗಾಯವಾಗಿದೆ ಎಂದು ವರದಿಗಳು ತಿಳಿಸಿವೆ. ಘರ್ಷಣೆ ಹಿನ್ನಲೆಯಲ್ಲಿ ರಾಜಸ್ತಾನದ ಹಲವೆಡೆ ಸೆಕ್ಷನ್ 144 ಜಾರಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. 
ಜೂನ್.24 ರಂದು ಜೈಪುರ ಪೊಲೀಸರು ಎನ್ ಕೌಂಟರ್ ನಡೆಸಿ ಕುಖ್ಯಾತ ಗ್ಯಾಂಗ್'ಸ್ಟರ್ ಆನಂದ್ ಪಾಲ್ ಸಿಂಗ್ ನನ್ನು ಹತ್ಯೆ ಮಾಡಿತ್ತು. ಆನಂದ್ ಪಾಲ್ ಸಿಂಗ್ ಚುರು ಸೇರಿದಂತೆ ಹಲವು ಕಡೆ ನಡೆದ 24ಕ್ಕೂ ಅಧಿಕ ಅಪರಾಧ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ. ಕೊಲೆ ಪ್ರಕರಣ ಸಂಬಂಧ 2015ರಲ್ಲೇ ಈತನನ್ನು ಪೊಲೀಸರು ಬಂಧಿಸಿದ್ದರು. ಅದೇ ವರ್ಷ ಸೆಪ್ಟೆಂಬರ್ ನಲ್ಲಿ ಅಜ್ಮೇರ್ ಜೈಲಿನಿಂದ ತಪ್ಪಿಸಿಕೊಂಡಿದ್ದ. ಆನಂದ್ ಪಾಲ್ ಬಗ್ಗೆ ಮಾಹಿತಿ ನೀಡಿದವರಿಗೆ ರೂ.5 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸರು ಘೋಷಣೆ ಮಾಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com