ಅಸ್ಸಾಂನಲ್ಲಿ ಪ್ರವಾಹ: ಸಂಕಷ್ಟದಲ್ಲಿ 10 ಲಕ್ಷ ಜನತೆ, ಸಾವಿನ ಸಂಖ್ಯೆ 59ಕ್ಕೆ ಏರಿಕೆ

ಅಸ್ಸಾಂ ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯ ಭೀಕರತೆ ಮತ್ತಷ್ಟು ಉಲ್ಬಣಗೊಳ್ಳುತ್ತಿದ್ದು, ಸುಮಾರು 10ಲಕ್ಷಕ್ಕೂ ಹೆಚ್ಚು ಜನತೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಗುವಾಹಟಿ: ಅಸ್ಸಾಂ ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯ ಭೀಕರತೆ ಮತ್ತಷ್ಟು ಉಲ್ಬಣಗೊಳ್ಳುತ್ತಿದ್ದು, ಸುಮಾರು 10ಲಕ್ಷಕ್ಕೂ ಹೆಚ್ಚು ಜನತೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಂಭವಿಸಿದ ಅನಾಹುತಗಳಲ್ಲಿ ಈ ವರೆಗೂ 59 ಮಂದಿ ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿವೆ. 

ಸುದೀರ್ಘವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೀರಿನ ಮಟ್ಟ ಕೂಡ ಅತಂಕಕಾರಿಯಾಗಿ ಏರಿಕೆಯಾಗುತ್ತಿದ್ದು, ಪ್ರವಾಹದಿಂದಾಗಿ 24 ಜಿಲ್ಲೆಗಳ ಒಟ್ಟು 10 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. 

24 ಜಿಲ್ಲೆಗಳ 1,795 ಗ್ರಾಮಗಳ ಒಟ್ಟು 11,93,458 ಜನರು ನಿರಾಶ್ರಿತರಾಗಿದ್ದಾರೆಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ. 
ಪ್ರವಾಹದಿಂದಾಗಿ ಧೆಮಾಜಿ, ಬಿಸ್ವನಾಥ್, ಲಕ್ಷ್ಮಿಪುರ, ಸೋನಿತ್ಪುರ, ಡರ್ರಾಂಗ್, ನಲ್ಬಾರಿ, ಬರ್ಪೇಟಾ, ಬೊಂಗೈಗಾಂವ್, ಚಿರಾಂಗ್, ಕೊಕ್ರಾಜಾರ್, ಥುಬ್ರಿ, ಸೊಪುತ್ ಸಲ್ಮಾರಾ, ಗೋಲಾಪರ, ಮೊರಿಗಾಂವ್, ನಾಗಾಂವ್, ಕರ್ಬಿ ಅಂಗ್ಲಾಂಗ್, ಗೊಲಾಘಾಟ್, ಜರ್ಹಟ್ ಮಜುಲಿ, ಸಿವ್ಸಾಗರ್, ಚಾರೈಡೋ, ದಿಬ್ರುಗರ್ಹ್, ಕರೀಂಗಂಜ್ ಮತ್ತು ಕ್ಯಾಚರ್ ಜಿಲ್ಲೆಗಳು ಸಂಕಷ್ಟಕ್ಕೆ ಸಿಲುಕಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

25 ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದು, ರಾಜ್ಯದಲ್ಲಿ 25 ಜಿಲ್ಲೆಗಳ  1,795 ಗ್ರಾಮದ 11,93,458 ಲಕ್ಷ ಮಂದಿ ಪ್ರವಾಹ ಪೀಡಿತರಾಗಿದ್ದಾರೆ, ವಿವಿಧ ಜಿಲ್ಲೆಗಳಲ್ಲಿ ಸುಮಾರು 129 ಪರಿಹಾರ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು, ನಿರಾಶ್ರಿತ ಜನರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com