ಜಿಎಸ್‌ಟಿ, ನೋಟು ನಿಷೇಧ ದೇಶದ ಅತೀ ದೊಡ್ಡ ಹಗರಣಗಳು: ಮಮತಾ ಬ್ಯಾನರ್ಜಿ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಮತ್ತು ನೋಟು ನಿಷೇಧ ದೇಶದ ಅತೀ ದೊಡ್ಡ ಹಗರಣಗಳು ಎಂದು ಪಶ್ಚಿಮ ಬಂಗಾಳ...
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಮತ್ತು ನೋಟು ನಿಷೇಧ ದೇಶದ ಅತೀ ದೊಡ್ಡ ಹಗರಣಗಳು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 
ಸಂಸತ್ ಮುಂಗಾರು ಅಧಿವೇಶನಕ್ಕೂ ಮುನ್ನ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, ಜಿಎಸ್‌ಟಿ ಮತ್ತು ನೋಟು ನಿಷೇಧ ಅತಿ ದೊಡ್ಡ ಹಗರಣಗಳಾಗಿವೆ. ನಾವು ಸಂತೋಷದಿಂದ ಜೈಲಿಗೆ ಹೋಗಲು ಸಿದ್ಧ, ಆದರೆ ಕೇಂದ್ರ ಸರ್ಕಾರದ ಇಂತಹ ಧೋರಣೆಗಳಿಗೆ ನಾವು ತಲೆ ಬಾಗುವುದಿಲ್ಲ ಎಂದು ಹೇಳಿದ್ದಾರೆ. 
ಕೇಂದ್ರ ಸರ್ಕಾರದ ಶೋಷಣೆಯನ್ನು ವಿರೋಧಿಸಿ ರಾಷ್ಟ್ರಪತಿ ಹುದ್ದೆ ವಿರೋಧ ಪಕ್ಷದ ಅಭ್ಯರ್ಥಿ ಮೀರಾಕುಮಾರ್ ಅವರಿಗೆ ಮತ ನೀಡಿದ್ದೇವೆ. ಎಲ್ಲ ವಿರೋಧ ಪಕ್ಷಗಳೂ ಒಗ್ಗೂಡಲು ಇದು ಸಕಾಲ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com