ವಕೀಲನಿಗೆ ಥಳಿಸುತ್ತಿರುವ ಮಹಿಳೆಯರು
ದೇಶ
ಮಹಿಳೆಯರ ಜತೆ ಅಸಭ್ಯ ವರ್ತನೆ: ಕೋರ್ಟ್ ಆವರಣದಲ್ಲೇ ವಕೀಲನಿಗೆ ಥಳಿತ
ಮಧ್ಯಪ್ರದೇಶದ ಗುನಾದ ಕೋರ್ಟ್ ಆವರಣದಲ್ಲೇ ಮಹಿಳೆಯರು ವಕೀಲನಿಗೆ ಥಳಿಸಿರುವ ಘಟನೆ ವರದಿಯಾಗಿದೆ...
ಗುನಾ: ಮಧ್ಯಪ್ರದೇಶದ ಗುನಾದ ಕೋರ್ಟ್ ಆವರಣದಲ್ಲೇ ಮಹಿಳೆಯರು ವಕೀಲನಿಗೆ ಥಳಿಸಿರುವ ಘಟನೆ ವರದಿಯಾಗಿದೆ.
ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿ ಸೆಕ್ಸ್ ಗೆ ಬೇಡಿಕೆಯಿಟ್ಟ ಎಂದು ಆರೋಪಿಸಿ ಮಹಿಳೆಯರು ವಕೀಲ ಮಹೇಂದ್ರ ಲೋದಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಕೋರ್ಟ್ ಆವರಣದಲ್ಲಿ ವಕೀಲನಿಗೆ ಮಹಿಳೆಯರು ಥಳಿಸುತ್ತಿರುವ ದೃಶ್ಯಗಳನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಚಿತ್ರಿಸಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

