ಬಿಹಾರ ಬಿಕ್ಕಟ್ಟು: ತೇಜಸ್ವಿ ಯಾದವ್ ಕಳಂಕಮುಕ್ತರಾಗಿ ಬಾರದಿದ್ದರೆ ನಿತೀಶ್‌ ಕುಮಾರ್‌ ಹೊಸ ಜನಾದೇಶ?

ಬಿಹಾರ ಆಡಳಿತರೂಢ ಮಹಾ ಮೈತ್ರಿಕೂಟದಲ್ಲಿನ ಬಿಕ್ಕಟ್ಟು ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಭ್ರಷ್ಟಾಚಾರ ಆರೋಪ....
ನಿತೀಶ್ ಕುಮಾರ್
ನಿತೀಶ್ ಕುಮಾರ್
ಪಾಟ್ನಾ: ಬಿಹಾರ ಆಡಳಿತರೂಢ ಮಹಾ ಮೈತ್ರಿಕೂಟದಲ್ಲಿನ ಬಿಕ್ಕಟ್ಟು ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರ ಹಾಗೂ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಕಳಂಕ ಮುಕ್ತರಾಗಿ ಬಾರದಿದ್ದರೆ ಹೊಸದಾಗಿ ಜನಾದೇಶ ಪಡೆಯಲು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸಿದ್ಧವಾಗಿದ್ದಾರೆ.
ಇಂದು ನಡೆಯುತ್ತಿರುವ ರಾಷ್ಟ್ರಪತಿ ಚುನಾವಣೆಯ ಬಳಿಕ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ತೇಜಸ್ವಿ ಯಾದವ್ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ನ್ಯೂಸ್‌ 18 ಡಾಟ್‌ ಕಾಮ್‌ ವರದಿ ಮಾಡಿದೆ. 
ಮೂಲಗಳ ಪ್ರಕಾರ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ತೇಜಸ್ವಿ ಯಾದವ್‌ ಅವರ ರಾಜಿನಾಮೆ ಪಡೆಯುವ ಬಗ್ಗೆ ಲಾಲು ಪ್ರಸಾದ್‌ ಯಾದವ್‌ ಅವರು ತುಟಿ ಬಿಚ್ಚದಿರುವುದರಿಂದ ನಿತೀಶ್ ಕುಮಾರ್ ಅವರು ತಮ್ಮ ನೇತೃತ್ವದ ಮಹಾ ಮೈತ್ರಿಕೂಟ ಸರ್ಕಾರ ಬಲಿ ಕೊಡಲು ಸಿದ್ಧರಾಗಿದ್ದು, ಹೊಸದಾಗಿ ಜನಾದೇಶವನ್ನು ಪಡೆಯುವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರನ್ನು ವಜಾಗೊಳಿಸುವಂತೆ ನಿತೀಶ್‌ ಕುಮಾರ್ ಅವರ ಮೇಲಿನ ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ವರದಿ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com