ಬಾರಾಬಂಕಿಯ ಅಜಯ್ ತಿವಾರಿ ಎಂಬ ಯುವಕ ತನ್ನ ಗೆಳೆಯರ ಜೊತೆ ಉತ್ತರ ಪ್ರದೇಶ ಶಿಕ್ಷಣ ಸಚಿವ ಸಂದೀಪ್ ಸಿಂಗ್ ಅವರನ್ನು ಭೇಟಿಯಾಗಲು ತೆರಳಿದ್ದ. ಈ ವೇಳೆ ಸಚಿವರ ಕೊಠಡಿಯಲ್ಲಿ ಇರಲಿಲ್ಲವಾಗಿತ್ತು, ಗೆಳೆಯರು ಹೊರಗಿದ್ದರು, ಆಗ ತಾನೊಬ್ಬನೇ ಇರುವುದನ್ನು ಕಂಡು ಆತನಿಗೊಂದು ಹುಚ್ಚು ಆಸೆ ಮೊಳಕೆಯೊಡೆದಿತ್ತು... ಕೂಡಲೇ ಆತ ಸಚಿವರ ಕುರ್ಚಿಯಲ್ಲಿ ಕುಳಿತು ಫೋಟೋ(ಸೆಲ್ಫಿ) ತೆಗೆದುಕೊಂಡಿದ್ದ.