ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಸುಳ್ಳುಗಾರ್ತಿ: ಚೀನಾ ಮಾಧ್ಯಮ

ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸುಳ್ಳುಗಾರ್ತಿ ಎಂದು ಚೀನಾ ಸರ್ಕಾರದ ಒಡೆತನದ ಗ್ಲೋಬಲ್ ಟೈಮ್ಸ್ ಪತ್ರಿಕೆ ಜರಿದಿದೆ.
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ಬಿಜೀಂಗ್: ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸುಳ್ಳುಗಾರ್ತಿ ಎಂದು ಚೀನಾ ಸರ್ಕಾರದ ಒಡೆತನದ ಗ್ಲೋಬಲ್ ಟೈಮ್ಸ್ ಪತ್ರಿಕೆ ಜರಿದಿದೆ. 
ನಿನ್ನೆ ರಾಜ್ಯಸಭೆಯಲ್ಲಿ ಮಾತನಾಡಿದ್ದ ಸುಷ್ಮಾ ಸ್ವರಾಜ್ ಅವರು ಡೋಕ್ಲಾಂ ಗಡಿ ವಿಚಾರವಾಗಿ ಎಲ್ಲ ದೇಶಗಳು ನಮ್ಮೊಂದಿಗಿವೆ. ಎರಡೂ ದೇಶಗಳು ಸೇನೆ ಹಿಂತೆಗೆದು ಮಾತುಕತೆಗೆ ತೊಡಗಿಸಿಕೊಳ್ಳಬೇಕು. ಭಾರತ ತನ್ನ ಸೇನೆಯನ್ನು ನಿಲ್ಲಿಸಿದ್ದು ತನ್ನ ಭದ್ರತೆಯ ಕುರಿತ ಕಾಳಜಿಯಿಂದ ಎಂದು ಹೇಳಿದ್ದರು. ಇದನ್ನೇ ಮುಂದಿಟ್ಟುಕೊಂಡು ಚೀನಾ ಪತ್ರಿಕೆ ಸುಷ್ಮಾ ಸ್ವರಾಜ್ ಅವರನ್ನು ಸುಳ್ಳುಗಾರ್ತಿ ಎಂದು ಜರಿದಿದೆ. 
ಡೋಕ್ಲಾಂ ಗಡಿಯಲ್ಲಿ ನಿಯೋಜಿಸಿರುವ ಚೀನಾ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂಬ ಭಾರತದ ಬೇಡಿಕೆಯನ್ನು ತಿರಸ್ಕರಿಸಿರುವ ಗ್ಲೋಬಲ್ ಟೈಮ್ಸ್ ಪತ್ರಿಕೆ, ಮಾತುಕತೆ ನಡೆಸುವ ಸಲುವಾಗಿ ಚೀನಾ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವುದನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಡೋಕ್ಲಾಂ ಚೀನಾ ಪ್ರದೇಶವಾಗಿದ್ದು, ಒಂದು ಇಂಚು ಭೂಮಿಯನ್ನು ಕಳೆದುಕೊಳ್ಳಲು ಒಪ್ಪುವುದಿಲ್ಲ ಎಂದು ವರದಿ ಮಾಡಿದೆ. 
ಸುಷ್ಮಾ ಸ್ವರಾಜ್ ನಿನ್ನೆ ನಾವು ರಾಜತಾಂತ್ರಿಕ ವಲಯವನ್ನು ಮುಕ್ತವಾಗಿರಿಸಿದ್ದೇವೆ. 2012ರಲ್ಲಿ ಭೂತಾನ್, ಚೀನಾ, ಭಾರತದ ಒಪ್ಪಂದದಂತೆ ಮೂರು ದೇಶಗಳ ಗಡಿ ಸೇರುವ ಟ್ರೈಜಂಕ್ಷನ್ ನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಆದರೆ ಭಾರೀ ಯಂತ್ರಗಳನ್ನು ತಂದು ರಸ್ತೆ ನಿರ್ಮಿಸುವ ಮೂಲಕ ಚೀನಾ ಒಪ್ಪಂದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಚೀನಾ ವಿರುದ್ಧ ವಾಗ್ದಾಳಿ ನಡೆಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com