ಐಎಸ್, ಅಲ್ ಖೈದಾ ಉಗ್ರ ಸಂಘಟನೆಗಳ ಉಗ್ರರು, ಸಹ ಸಂಘಟನೆಗಳಿಗೆ ವಿಶ್ವಸಂಸ್ಥೆ ನಿರ್ಬಂಧ

ಅಲ್ ಖೈದಾ, ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗಳಿಗೆ ಸಂಬಂಧಿಸಿದ ಉಗ್ರರು ಹಾಗೂ ಸಹ ಸಂಘಟನೆಗಳಿಗೆ ನಿರ್ಬಂಧ ವಿಧಿಸುವುದರ ಸಂಬಂಧ ವಿಶ್ವಸಂಸ್ಥೆ ನಿರ್ಣಯ ಅಂಗೀಕರಿಸಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ
ವಿಶ್ವಸಂಸ್ಥೆ ಭದ್ರತಾ ಮಂಡಳಿ
ವಿಶ್ವಸಂಸ್ಥೆ: ಅಲ್ ಖೈದಾ, ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗಳಿಗೆ ಸಂಬಂಧಿಸಿದ ಉಗ್ರರು ಹಾಗೂ ಸಹ ಸಂಘಟನೆಗಳಿಗೆ ನಿರ್ಬಂಧ ವಿಧಿಸುವುದರ ಸಂಬಂಧ ವಿಶ್ವಸಂಸ್ಥೆ ನಿರ್ಣಯ ಅಂಗೀಕರಿಸಿದೆ. 
ಅಲ್ ಖೈದಾ ಉಗ್ರ ಸಂಘಟನೆಗೆ ಸಂಬಂಧಿಸಿದ ಶಸ್ತ್ರಸಜ್ಜಿತ ಜುಂಡ್ ಅಲ್ ಆಕ್ಸಾ ಹಾಗೂ ಇಸ್ಲಾಮಿಕ್ ಸ್ಟೇಟ್ ನ ಜಯಶ್ ಖಲೀದ್ ಇಬ್ನ್ ಅಲ್-ವಲೀದ್ ಉಗ್ರ ಸಂಘಟನೆಗಳಿಗೆ ಹಾಗೂ ಸಂಘಟನೆಗಳ ಉಗ್ರರಿಗೆ ವಿಶ್ವಸಂಸ್ಥೆ ನಿರ್ಬಂಧ ವಿಧಿಸಿದೆ. ಇನ್ನು ಸಿರಿಯಾದಲ್ಲಿರುವ ಎರಡು ಹಣ ವಿನಿಮಯ ಉದ್ಯಮಗಳ ಬಗ್ಗೆ ಈ ಎರಡು ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವು ನೀಡಿದ್ದರ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಸಂಸ್ಥೆಗಳಿಗೂ ವಿಶ್ವಸಂಸ್ಥೆ ನಿರ್ಬಂಧ ವಿಧಿಸಿದೆ. 
ಭಯೋತ್ಪಾದನೆ ಮಾನವ ಕುಲಕ್ಕೇ ಮಾರಕವಾಗಿದೆ ಎಂದು ನಿರ್ಣಯ ಅಂಗೀಕರಿಸಿದ ವೇಳೆ ಚೀನಾದ ರಾಯಭಾರಿ ಹೇಳಿದ್ದಾರೆ. ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ವಿಶ್ವಸಂಸ್ಥೆಯಲ್ಲಿ ವ್ಯಕ್ತವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com