ದೇಶ

ಚೀನಾಗೆ ಎನ್ಎಸ್ ಜಿ ಅಜಿತ್ ದೋವಲ್ ಭೇಟಿ ಡೋಕ್ಲಾಮ್ ಬಿಕ್ಕಟ್ಟು ಬಗೆಹರಿಯಲು ಸಹಕಾರಿ: ಚೀನಾ ವಿಶ್ಲೇಷಕರು

ಚೀನಾಗೆ ಎನ್ಎಸ್ ಜಿ ಅಜಿತ್ ದೋವಲ್ ಭೇಟಿ ಡೋಕ್ಲಾಮ್ ಬಿಕ್ಕಟ್ಟು ಬಗೆಹರಿಯಲು ಸಹಕಾರಿ: ಚೀನಾ ವಿಶ್ಲೇಷಕರು
ಅಜಿತ್ ದೋವಲ್
Published On :
ಬೀಜಿಂಗ್: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೆಲವೇ ದಿನಗಳಲ್ಲಿ ಚೀನಾಗೆ ಭೇಟಿ ನೀಡಲಿದ್ದು, ಅಜಿತ್ ದೋವಲ್ ಅವರ ಭೇಟಿಯಿಂದ ಡೋಕ್ಲಾಮ್ ಬಿಕ್ಕಟ್ಟು ಬಗೆಹರಿಯಲು ಸಾಧ್ಯವಿದೆ ಎನ್ನುತ್ತಿದ್ದಾರೆ ಚೀನಾದ ವಿಶ್ಲೇಷಕರು. 
ಜು.27-28 ರಂದು ಅಜಿತ್ ದೋವಲ್ ಚೀನಾಗೆ ಭೇಟಿ ನೀಡಲಿದ್ದು, ಇದಕ್ಕೂ ಮುನ್ನ ಚೀನಾದ ವಿಶ್ಲೇಷಕರು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅಜಿತ್ ದೋವಲ್ ಭೇಟಿಯಿಂದ ಡೋಕ್ಲಾಮ್ ಬಿಕ್ಕಟ್ಟು ಬಗೆಹರಿಯಲು ಸಾಧ್ಯವಿದೆ ಎಂದು ಹೇಳಿದ್ದಾರೆ. 
ಬ್ರಿಕ್ಸ್ ರಾಷ್ಟ್ರಗಳ ಎನ್ಎಸ್ಎ ಗಳ ಸಭೆಯಲ್ಲಿ ಅಜಿತ್ ದೋವಲ್ ಭಾಗವಹಿಸಲಿದ್ದು, ಚೀನಾದ ಎನ್ಎಸ್ಎ ಜೊತೆಗೂ ಮಾತುಕತೆ ನಡೆಸಲಿದ್ದಾರೆ, ದೋವಲ್ ಅವರ ಈ ಭೇಟಿ  ಡೋಕ್ಲಾಮ್ ಬಿಕ್ಕಟ್ಟು ಬಗೆಹರಿಯಲು ಸಹಕಾರಿಯಾಗಿದೆ ಎಂದು ಚೀನಾ ವಿಶ್ಲೇಷಕರು ಅಭಿಪ್ರಾಯಪಟ್ಟಿರುವುದನ್ನು ಗ್ಲೋಬಲ್ ಟೈಮ್ಸ್ ಲೇಖನವೊಂದರಲ್ಲಿ ಪ್ರಕಟಿಸಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.