20 ವರ್ಷದ ಯುವತಿ ಪಿಂಕಿ ಸರ್ಕಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಬಿಐ ವಿಶೇಷ ನ್ಯಾಯಾಧೀಶರಾದ ಪವನ್ ತಿವಾರಿಯವರು ತೀರ್ಪು ಪ್ರಕಟಿಸಿದ್ದಾರೆ. ನೋಯ್ಡಾದ ನಿತಾರಿಯಲ್ಲಿ ನಡೆದಿದ್ದ 16 ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಪೈಕಿ ಇದೂ ಒಂದಾಗಿದೆ.
16 ಪ್ರಕರಣಗಳ ಪೈಕಿ 8 ಪ್ರಕರಣಗಳಲ್ಲಿ ತೀರ್ಪು ಪ್ರಕಟಗೊಂಡಿದೆ. ಪ್ರಮುಖ ಆರೋಪಿ ಸುರೇಂದ್ರ ಕೋಲಿಗೆ ನ್ಯಾಯಾಲಯ ಎಲ್ಲಾ ಪ್ರಕರಣದಲ್ಲಿ ಗರಿಷ್ಠ ಶಿಕ್ಷೆ ವಿಧಿಸಿದೆ.
ಮಹಿಳೆ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ದೊರಕಿರುವ ವಿಧಿವಿಜ್ಞಾನ ಪ್ರಯೋಗಾಲಯದ ಸಾಕ್ಷ್ಯಾಧಾರಗಳಿನುಸಾರವಾಗಿ ಇಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ವಕೀಲ ಜೆ.ಪಿ. ಶರ್ಮಾ ಅವರು ಆರೋಪಿಗಳಿಗೆ ಮರಣ ದಂಡನೆ ನೀಡುವಂತೆ ಮನವಿ ಮಾಡಿದ್ದರು.