ನವದೆಹಲಿ: ವಿಶ್ವದ ದಢೂತಿ ಮಹಿಳೆ ಎಂದು ಗುರುತಿಸಲ್ಪಟ್ಟಿದ್ದ, ತನ್ನ ದೇಶ ಈಜಿಪ್ಟ್ ನಲ್ಲಿ ಸರಿಯಾದ ಚಿಕಿತ್ಸೆ ಸಿಗದೆ, ಆರ್ಥಿಕ ಅಡಚಣೆಯಿಂದ ನೊಂದಿದ್ದ ಎಮನ್ ಅಹ್ಮದ್ ಗೆ ಸೂಕ್ತ ಚಿಕಿತ್ಸೆ ಸಿಕ್ಕಿದೆ. ಎಲ್ಲರಂತೆ ಬದುಕಿ ಬಾಳುವ ಆಸೆ ಅವರಲ್ಲಿ ಮತ್ತೆ ಚಿಗುರೊಡೆದಿದೆ.
ಮುಂಬೈಯ ಸೈಫೀ ಆಸ್ಪತ್ರೆಯಲ್ಲಿ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾದ 36 ವರ್ಷದ ಎಮನ್ ಅಹ್ಮದ್ ಗೆ ಇಲ್ಲಿ ಕೂಡ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಅಬು ದಾಬಿಯ ಬುರ್ಜಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.
ಅಬು ಧಾಬಿಗೆ ಬಂದು ಮೂರು ತಿಂಗಳು ಕಳೆದ ನಂತರ ಇದೀಗ ಎಮನ್ ತೂಕ ಇದೀಗ ಬರೋಬ್ಬರಿ 65 ಕೆಜಿ ಇಳಿದಿದೆ.
ನಿನ್ನೆ ಆಸ್ಪತ್ರೆಯ ಆವರಣದಲ್ಲಿ ವೈದ್ಯರು ಸುದ್ದಿಗೋಷ್ಠಿ ನಡೆಸಿ ಎಮನ್ ಳ ಆರೋಗ್ಯದ ಬಗ್ಗೆ ವಿವರ ನೀಡಿದರು. ಆಕೆಯ ಈಗಿನ ತೂಕದ ಬಗ್ಗೆ ವಿವರ ನೀಡಲು ನಿರಾಕರಿಸಿದ ವೈದ್ಯರು ಎಮನ್ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯದಲ್ಲಿ ತುಂಬಾ ಸುಧಾರಣೆ ಕಂಡುಬಂದಿದ್ದಾರೆ ಎಂದು ಹೇಳಿದ್ದಾರೆ.
ಇನ್ನಷ್ಟು ತೂಕ ಕಳೆದುಕೊಳ್ಳುವ ಅವಶ್ಯಕತೆಯಿದ್ದರೂ ಕೂಡ ಆಕೆ ಸಂಪೂರ್ಣ ಗುಣಮುಖಳಾಗಬಹುದೆಂಬ ವಿಶ್ವಾಸವನ್ನು ವೈದ್ಯರು ಹೊಂದಿದ್ದಾರೆ.