ಎನ್ಎಸ್ಎ ದೋವಲ್ ಭೇಟಿ ಗಡಿ ವಿವಾದ ಬಗೆಹರಿಸಿಕೊಳ್ಳಲು ಉತ್ತಮ ಅವಕಾಶ: ಚೀನಾ ಪತ್ರಿಕೆ

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಚೀನಾಗೆ ಭೇಟಿ ನೀಡಲು ಇನ್ನೆರಡು ದಿನಗಳಿದ್ದು, ದೋವಲ್ ಭೇಟಿ ಬಗ್ಗೆ ಚೀನಾ ಪತ್ರಿಕೆ ಲೇಖನ ಪ್ರಕಟಿಸಿದ್ದು, ಅಜಿತ್ ದೋವಲ್ ಅವರ ಚೀನಾ ಭೇಟಿ ಗಡಿ ವಿವಾದ ಬಗೆಹರಿಸಿಕೊಳ್ಳುವುದಕ್ಕೆ ಉತ್ತಮ ಅವಕಾಶ ಎಂದು ಅಭಿಪ್ರಾಯಪಟ್ಟಿದೆ.
ಅಜಿತ್ ದೋವಲ್
ಅಜಿತ್ ದೋವಲ್
ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಚೀನಾಗೆ ಭೇಟಿ ನೀಡಲು ಇನ್ನೆರಡು ದಿನಗಳಿದ್ದು, ದೋವಲ್ ಭೇಟಿ ಬಗ್ಗೆ ಚೀನಾ ಪತ್ರಿಕೆ ಲೇಖನ ಪ್ರಕಟಿಸಿದ್ದು, ಅಜಿತ್ ದೋವಲ್ ಅವರ ಚೀನಾ ಭೇಟಿ ಗಡಿ ವಿವಾದ ಬಗೆಹರಿಸಿಕೊಳ್ಳುವುದಕ್ಕೆ ಉತ್ತಮ ಅವಕಾಶ ಎಂದು ಅಭಿಪ್ರಾಯಪಟ್ಟಿದೆ. 
ಅಜಿತ್ ದೋವಲ್ ಅವರನ್ನು ಭಾರತದ ಪ್ರಮುಖ ಯೋಜಕ, ವ್ಯವಸ್ಥಾಪಕ ಎಂಬ ಅರ್ಥದಲ್ಲಿ ಹೇಳಿರುವ ಚೀನಾ ಪತ್ರಿಕೆ, ಬ್ರಿಕ್ಸ್ ಎನ್ಎಸ್ಎ ಗಳ ಸಭೆ ವಾಡಿಕೆಯ ಸಮ್ಮೇಳನವಾಗಿದ್ದು, ಈ ಸಮ್ಮೇಳನದ ವೇದಿಕೆಯನ್ನು ಭಾರತ ಚೀನಾ- ಭಾರತದ ಗಡಿ ವಿಷಯವನ್ನು ಎತ್ತಲು ಬಳಕೆ ಮಾಡಿಕೊಳ್ಳಬಾರದು ಎಂದು ಚೀನಾ ಪತ್ರಿಕೆ ಎಚ್ಚರಿಕೆ ನೀಡಿದೆ. 
ಚೀನಾ-ಭಾರತದ ನಡುವೆ ಡೋಕ್ಲಾಮ್ ವಿವಾದ ಉಂಟಾಗಿದ್ದು, ಇದಕ್ಕೆ ಭಾರತದಲ್ಲಿ ಪ್ರಮುಖ ಸಂಚು ರೂಪಿಸಿರುವವರು ಅಜಿತ್ ದೋವಲ್ ಆಗಿರುವ ಸಾಧ್ಯತೆಗಳಿವೆ. ಡೋಕ್ಲಾಮ್ ಪ್ರದೇಶದಿಂದ ಭಾರತ ತನ್ನ ಸೇನಾ ಪಡೇಗಳನ್ನು ಬೇಷರತ್ತಾಗಿ ವಾಪಸ್ ಕರೆಸಿಕೊಳ್ಳುವವರೆಗೂ ಭಾರತದೊಂದಿಗೆ ಚೀನಾ ಗಡಿಗೆ ಸಂಬಂಧಿಸಿದ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com