ನೂತನ ರಾಷ್ಟ್ರಪತಿಯಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೆಹರ್ ಅವರಿಂದ ಪ್ರಮಾಣವಚನ ಸ್ವೀಕರಿಸಿಕೊಂಡ ರಾಮನಾಥ್ ಕೋವಿಂದ್
ದೇಶ
ರಾಮನಾಥ್ ಕೋವಿಂದ್ ಅಧ್ಯಯನ ಮಾಡಿದ ಕಾಲೇಜಿನಲ್ಲಿ ಇಂದು ಹಬ್ಬದ ವಾತಾವರಣ!
ಇತ್ತ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿಗಳಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ...
ಕಾನ್ಪುರ(ಉ.ಪ್ರ): ಇತ್ತ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿಗಳಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಅವರು ಓದಿದ ಕಾಲೇಜಿನಲ್ಲಿ ಇಂದು ಮಕ್ಕಳಿಗೆ ಭೋಜನವೇರ್ಪಡಿಸಲಾಗಿತ್ತು.
ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಬಿಶಂಬರ್ ನಾಥ್ ಸನಾತನ್ ಧರ್ಮ ಅಂತರ ಕಾಲೇಜಿನಲ್ಲಿ ರಾಮನಾಥ್ ಕೋವಿಂದ್ ಅವರು ಶಾಲಾ ಶಿಕ್ಷಣವನ್ನು ಪೂರೈಸಿದ್ದರು. ತಮ್ಮ ಶಾಲೆಯ ಹಳೆ ವಿದ್ಯಾರ್ಥಿ ಇಂದು ರಾಷ್ಟ್ರಪತಿಯಾದ ಸಂತಸದಲ್ಲಿ ಶಾಲೆಯ ಅಧಿಕಾರಿಗಳು ಶಿಕ್ಷಕರು,ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಹಾಗೂ ದಾರಿಹೋಕರಿಗೆ ಭೋಜನ ನೀಡಿದ್ದರು.
ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಬೀರೇಂದ್ರ ಕುಮಾರ್ ಶುಕ್ಲ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿ ರಾಮ್ ನಾಥ್ ಕೋವಿಂದ್ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ನಮಗೆ ಬಹಳ ಸಂತಸ ತಂದಿದೆ. ಇದಕ್ಕಾಗಿ ನಾವು ಇಡೀ ಕಾಲೇಜಿಗೆ ಭೋಜನ ಏರ್ಪಡಿಸಿದ್ದೇವೆ ಎಂದು ಹೇಳಿದರು.
ಮತ್ತೊಬ್ಬ ಪ್ರೊಫೆಸರ್ ಮಾತನಾಡಿ, ರಾಮ್ ನಾಥ್ ಕೋವಿಂದ್ ಅವರು ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದ ನೇರ ಪ್ರಸಾರವನ್ನ ವೀಕ್ಷಿಸಲು ಶಾಲಾ ಮುಖ್ಯಸ್ಥರು ಎಲ್ ಸಿಡಿ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದರು.
ರಾಮ್ ನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಪ್ರಧಾನಿಯವರಿಗೆ ಮತ್ತು ಅವರನ್ನು ಬೆಂಬಲಿಸಿದ ಇಡೀ ದೇಶಕ್ಕೆ ಕೃತಜ್ಞತೆ ಹೇಳುತ್ತೇವೆ ಎಂದರು.


