ಮುಂಗಾರು ಅಧಿವೇಶನ ಹಿನ್ನೆಲೆ ಮಹಾಘಟಬಂಧನ್(ಮಹಾಮೈತ್ರಿ) ಪಕ್ಷಗಳಾದ ರಾಷ್ಟ್ರೀಯ ಜನತಾದಳ(ಆರ್ಜೆಡಿ) ಮತ್ತು ಜಾತ್ಯಾತೀತ ಜನತಾದಳ(ಜೆಡಿಯು) ಬೇರೆ ಬೇರೆ ಸಭೆಗಳನ್ನು ನಡೆಸಿದ್ದವು. ನಂತರ ಮಾತನಾಡಿದ ಆರ್ಜೆಡಿ ಪಕ್ಷದ ಶಾಕ ಬಾಯ್ ಬೈರೆಂದ್ರ ಅವರು, ಇಂತಹ ಸಭೆಗಳು ಸಾಮಾನ್ಯ. ಆದರೆ ಬಿಹಾರದಲ್ಲಿ ಸರ್ಕಾರ ನಡೆಸುತ್ತಿರುವ ಆರ್ಜೆಡಿ ಮತ್ತು ಜೆಡಿಯು ತಮ್ಮ ಮೈತ್ರಿಯನ್ನು ಕಡಿದುಕೊಳ್ಳಲಿವೆ ಎಂಬ ಊಹಾಪೋಹಗಳಿಗೆ ಅಂತ್ಯವಾಡಿದ ಅವರು ಬಿಹಾರದ ಮಹಾಮೈತ್ರಿ ಒಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.