ಘಟ್ಕೋಪರ್ ಕಟ್ಟಡ ಕುಸಿತ ಪ್ರಕರಣ: ಮುಂಬಯಿಯಲ್ಲಿ ಶಿವಸೇನೆ ಮುಖಂಡ ಸುನಿಲ್ ಶೆತಾಪ್ ಬಂಧನ

ಘಾಟ್ಕೊಪರ್‌ನಲ್ಲಿ ಮಂಗಳವಾರ 4 ಅಂತಸ್ತಿನ ವಸತಿ ಕಟ್ಟಡ ಕುಸಿದು 17 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿ...
ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಎನ್ ಡಿ ಆರ್ ಎಫ್ ಸಿಬ್ಬಂದಿ
ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಎನ್ ಡಿ ಆರ್ ಎಫ್ ಸಿಬ್ಬಂದಿ
ಮುಂಬಯಿ: ಘಾಟ್ಕೊಪರ್‌ನಲ್ಲಿ ಮಂಗಳವಾರ 4 ಅಂತಸ್ತಿನ ವಸತಿ ಕಟ್ಟಡ ಕುಸಿದು 17 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿ ಪೊಲೀಸರು ಶಿವಸೇನಾ ಮುಖಂಡ ಸುನಿಲ್ ಶೆತಾಪ್ ಅವರನ್ನು ಬಂಧಿಸಿದ್ದಾರೆ.
ಕಟ್ಟಡದಲ್ಲಿ ಕಾನೂನು ಬಾಹಿರವಾಗಿ ರಿಪೇರಿ ಕಾಮಗಾರಿ ಮಾಡಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ. 
ಈ ಕಟ್ಟಡದ ನೆಲ ಮಹಡಿಯಲ್ಲಿ ನರ್ಸಿಂಗ್ ಹೋಮ್ ಇದೆ. ಶೆತಾಪ್ ಗೆ ಸೇರಿದ ಈ ನರ್ಸಿಂಗ್ ಹೋಮ್ ರಿಪೇರಿ ನಡೆಸಲಾಗುತ್ತಿತ್ತು, ಭಾರತೀಯ ದಂಡ ಸಂಹಿತೆ ಅನ್ವಯ ಶೆತಾಪ್ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಲಾಗುತ್ತಿದೆ. 
ಮಂಗಳವಾರ ಬೆಳಗ್ಗೆ 7 ಗಂಟೆಗೆ ಆತನನ್ನು ಬಂಧಿಸಿ ಕಳೆದ ರಾತ್ರಿ ಸುಮಾರು 3 ತಾಸುಗಳ ಕಾಲ ವಿಚಾರಣೆಗೊಳಪಡಿಸಲಾಯಿತು. 
ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಸಿ 28 ಮಂದಿಯನ್ನುಅವಶೇಷಗಳ  ಅಡಿಯಿಂದ ರಕ್ಷಿಸಲಾಗಿದೆ. 11 ಮಂದಿ ಗಂಭೀರ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 35 ವರ್ಷ ಹಳೆಯ ಸಾಯಿದರ್ಶನ್‌ ಅಪಾರ್ಟ್‌ಮೆಂಟ್‌ ನಿನ್ನೆ ಬೆಳಗ್ಗೆ 10.45ರ ವೇಳೆಗೆ ಕುಸಿತಗೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com