ಎನ್ಆರ್ ಐ ದಂಪತಿಗೆ ಜನಿಸಿದ ಮಗುವಿನ ಉಸ್ತುವಾರಿ ತಾಯಿಗೆ ನೀಡಿ: ತಜ್ಞರ ಸಮಿತಿಗೆ ಸಲಹೆ

ಎನ್ಆರ್ಐ ವಿವಾಹಗಳಿಂದ ಜನಿಸಿದ ಮಗುವಿನ ಸಹಜ ಪೋಷಕರೆಂದು ತಂದೆಯ ಬದಲು ತಾಯಿಯನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಎನ್ಆರ್ಐ ವಿವಾಹಗಳಿಂದ ಜನಿಸಿದ ಮಗುವಿನ ಸಹಜ ಪೋಷಕರೆಂದು ತಂದೆಯ ಬದಲು ತಾಯಿಯನ್ನು ಮಾಡಬೇಕೆಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೇಮಿಸಿರುವ ತಜ್ಞರ ಸಮಿತಿಗೆ ಅನೇಕರಿಂದ ಸಲಹೆಗಳು ಬಂದಿವೆ.
ಹಿಂದೂ ಅಪ್ರಾಪ್ತ ಮತ್ತು ರಕ್ಷಕ ಕಾಯಿದೆ, 1956,ಪ್ರಕಾರ, ಅಪ್ರಾಪ್ತ ಮಕ್ಕನ್ನು ನೋಡಿಕೊಳ್ಳುವ ಜವಾಬ್ದಾರಿ ತಂದೆಯದ್ದು. ಆದರೆ 5 ವರ್ಷಕ್ಕಿಂತ ಕೆಳಗಿನ ಮಕ್ಕಳು ತಾಯಿಯೊಂದಿಗೆ ಇರಬೇಕು ಎಂದು ಕೂಡ ಕಾಯ್ದೆ ಹೇಳುತ್ತದೆ.
ಭಾರತೀಯ ಯುವತಿ ಮತ್ತು ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಯುವಕನ ವಿವಾಹವನ್ನು ಎನ್ಆರ್ ಐ ವಿವಾಹವೆಂದು ಕರೆಯಲಾಗುತ್ತದೆ. ಈ ವಿವಾಹದ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯಕ್ಕೆ ಅನೇಕ ದೂರುಗಳು, ಸಲಹೆಗಳು ಬಂದಿದ್ದವು. ಇದನ್ನು ತಜ್ಞರ ಸಮಿತಿಗೆ ಕಳುಹಿಸಲಾಗಿದೆ. ತಜ್ಞರ ಸಮಿತಿ ಈ ಎಲ್ಲಾ ಸಲಹೆಗಳನ್ನು ಪರಿಗಣಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಿದೆ.
ತಜ್ಞರ ಸಮಿತಿಯ ಶಿಫಾರಸುಗಳನ್ನು ಪರೀಕ್ಷಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ತಿಳಿಸಿದೆ.
ಎನ್ಆರ್ ಐ ಪಂಜಾಬ್ ಆಯೋಗದ ಮಾಜಿ ಅಧ್ಯಕ್ಷರ ನೇತೃತ್ವದ ತಜ್ಞರ ಸಮಿತಿಯನ್ನು ಕಳೆದ ವರ್ಷ ರಚಿಸಲಾಗಿತ್ತು. ಎನ್ಆರ್ಐ ವಿವಾಹವಾಗಿ ವಿಚ್ಛೇದನವಾದ ನಂತರ ಮಕ್ಕಳ ಉಸ್ತುವಾರಿ ನೋಡಿಕೊಳ್ಳುವ ಕುರಿತು ಸಂದೇಹಗಳು ಎದ್ದಿದ್ದವು.  ಈಗಿರುವ ಕಾನೂನಿನ ತಿದ್ದುಪಡಿ ಮತ್ತು ಎನ್ಆರ್ಐ ದೂರುಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಇತ್ಯರ್ಥಪಡಿಸಲು ಸಲಹೆ ನೀಡಲು ತಜ್ಞರ ಸಮಿತಿಯನ್ನು ರಚಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com