ದೇಶಕ್ಕಾಗಿ ಬದುಕಬೇಕು, ದೇಶವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು: 'ಮನ್ ಕಿ ಬಾತ್'ನಲ್ಲಿ ಪ್ರಧಾನಿ ಮೋದಿ

ದೇಶಕ್ಕಾಗಿ ನಾವು ಇಂದು ಸಾಯಬೇಕಿಲ್ಲ, ದೇಶಕ್ಕಾಗಿ ಬದುಕಬೇಕಾಗಿದೆ. ದೇಶವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Updated on

ನವದೆಹಲಿ: ದೇಶಕ್ಕಾಗಿ ನಾವು ಇಂದು ಸಾಯಬೇಕಿಲ್ಲ, ದೇಶಕ್ಕಾಗಿ ಬದುಕಬೇಕಾಗಿದೆ. ದೇಶವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ. 

34ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನುದ್ದೇಶಿ ಮಾತನಾಡಿರುವ ಪ್ರಧಾನಿ ಮೋದಿಯವರು, ಮೊದಲಿಗೆ ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಗುಜರಾತ್, ರಾಜಸ್ತಾನ ಮತ್ತು ಅಸ್ಸಾಂ ರಾಜ್ಯಗಳ ಕುರಿತಂತೆ ಮಾತನಾಡಿದರು. ಪ್ರವಾಹ ಪೀಡಿತ ರಾಜ್ಯಗಳನ್ನು ಗಮನಿಸುತ್ತಿದ್ದೇನೆ. ಪ್ರವಾಹಕ್ಕೊಳಗಾಗಿರುವ ರಾಜ್ಯಗಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ ಎಂದು ಹೇಳಿದ್ದಾರೆ. 

ಪ್ರಕೃತಿ ನಮಗೆ ಜೀವನವನ್ನು ಕೊಟ್ಟಿದೆ. ಆದರೆ, ಪ್ರವಾಹಗಳು ಹಾಗೂ ಭೂಕಂಪಗಳಿಂದಾಗಿ ಹಾನಿಗಳು ಎದುರಾಗುತ್ತಿವೆ. ವಿಮಾ ಕಂಪನಿಗಳು ಸಕ್ರಿಯಾವಾಗಿ ಕೆಲಸ ಮಾಡಬೇಕಿದ್ದು, ರೈತರಿಗೆ ತ್ವರಿತವಾಗಿ ವಿಮಾ ಪರಿಹಾರಗಳನ್ನು ನೀಡಬೇಕಿದೆ. ಪ್ರವಾಹ ಪೀಡಿತ ರಾಜ್ಯಗಳಿಗಾಗಿ ಈಗಾಗಲೇ ಅಲ್ಪಾವಧಿ ಹಾಗೂ ದೀರ್ಘಾವಧಿ ಚಯೋಜನೆಗಳು ಸಿದ್ಧಗೊಂಡಿದ್ದು, 24*7 ಪ್ರವಾಹ ನಿಯಂತ್ರಣ ಸಹಾಯವಾಣಿ 1078 ಕಾರ್ಯನಿರ್ವಹಿಸುತ್ತಿವೆ. ಆಧುನಿಕ ತಂತ್ರಜ್ಞಾನದಿಂದಾಗಿ ಹವಾಮಾನ ಮುನ್ಸೂಚನಾ ವರದಿಗಳು ಲಭಿಸುತ್ತಿವೆ. ಹಾನಿಗಳನ್ನು ತಪ್ಪಿಸಲು ಹವಾಮಾನ ಮೂನ್ಸೂಚನೆಗಳನ್ನು ಹೇಗೆ ಬಳಕೆ ಮಾಡಬೇಕೆಂಬುದನ್ನು ನಾವು ಕಲಿಯಬೇಕಿದೆ ಎಂದು ತಿಳಿಸಿದ್ದಾರೆ. 

ನಂತರ ಸರಕು ಮತ್ತು ಸೇವಾ ತೆರಿಗೆ ಕುರಿತಂತೆ ಮಾತನಾಡಿರುವ ಅವರು, ಜಿಎಸ್ ಟಿ ಜಾರಿ ಬಗ್ಗೆ ಒಬ್ಬ ಬಡ ವ್ಯಕ್ತಿ ಯಾವ ರೀತಿ ಲಾಭಗಳನ್ನು ತಂದುಕೊಟ್ಟಿದೆ ಎಂಬುದರ ಬಗ್ಗೆ ಪತ್ರ ಬರೆದಿರುವುದನ್ನು ನೋದಿ ಬಹಳ ಸಂತೋಷವಾಯಿತು. ಜಿಎಸ್ ಟಿ ಜಾರಿಗೆ ಬಂದು ತಿಂಗಳು ಕಳೆಯುತ್ತಿದೆ. ಜಿಎಸ್ ಟಿ ಯಿಂದಾಗಿ ಆಗುತ್ತಿರುವ ಲಾಭಗಳನ್ನು ಇದು ನಾವು ನೋಡುತ್ತಿದ್ದೇವೆ. ಜಿಎಸ್ ಟಿ ಆರ್ಥಿಕ ವ್ಯವಸ್ಥೆಯನ್ನೇ ಬದಲಾಯಿಸಿದೆ. ಸಂಯುಕ್ತ ವ್ಯವಸ್ಥೆ ಸಹಕಾರಕ್ಕೆ ಜಿಎಸ್ ಟಿ ಉದಾಹರಣೆಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಸೇರಿ ನಿರ್ಧಾರವನ್ನು ಕೈಗೊಂಡಿತ್ತು. ಜಿಎಸ್'ಟಿ ಯಶಸ್ವಿಗೊಳ್ಳುವಂತೆ ಮಾಡಿದ ದೇಶದ ಜನತೆಗೆ ಈ ಮೂಲಕ ಧನ್ಯವಾದಗಳನ್ನು ಹೇಳುತ್ತೇನೆಂದು ಹೇಳಿದ್ದಾರೆ.

ನಂತರ ಭಾರತ ಬಿಟ್ಟು ತೊಲಗಿ ಚಳುವಳಿ ಕುರಿತಂತೆ ಮಾತನಾಡಿರುವ ಅವರು, ಭಾರತ ಬಿಟ್ಟು ತೊಲಗಿ ಚಳುವಳಿಯನ್ನು ಆಗಸ್ಟ್ ಕ್ರಾಂತಿ ಎಂದೂ ಕೂಡ ಕರೆಯಲಾಗುತ್ತದೆ. ಆಗಸ್ಟ್ ಕ್ರಾಂತಿ 1942ರ ಆ.9ರಂದು ಆರಂಭಗೊಂಡಿತ್ತು. ಆಗಸ್ಟ್ 15 1947ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನವಾಯಿತು. ಈ ವರ್ಷ ನಾವು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೇವೆ. ಆದರೆ, ಭಾರತ ಬಿಟ್ಟು ತೊಲಗಿ ಎಂಬ ಘೋಷಣೆ ಬಂದಿದ್ದು ಡಾ.ಯೂಸುಫ್ ಮೆಹೆರ್ ಅಲಿ ಅವರಿಂದ ಎಂಬುದು ಕೇವಲ ಕೆಲ ಜನರಿಗಷ್ಟೇ ಗೊತ್ತಿದೆ. 1857ರಿಂದ 1945 ವರೆಗಿನ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಾಕಷ್ಟು ಜನರು ಸಾವನ್ನಪ್ಪಿದ್ದಾರೆ. 

ಭಾರತ ಬಿಟ್ಟು ತೊಲಗಿ ಚಳುವಳಿಯ ನೇತೃತ್ವವಹಿಸಿದ್ದ ಮಹಾತ್ಮ ಗಾಂಧೀಜಿಯವನ್ನು ನಾವು ನೆನೆಯುತ್ತೇವೆ. ಲೋಕ ನಾಯಕ್ ಜೆಪಿ ಮತ್ತು ಡಾ. ಲೋಹಿಯಾ ಅವರನ್ನು ನೆನೆಯುತ್ತೇವೆ. 1920ರಿಂದ 1942 ರರವೆಗೆ ಹಲವು ಗಾಂಧೀ ಚಳುವಳಿಗಳನ್ನು ನಾವು ನೋಡಿದ್ದೇವೆ. ಮಹಾತ್ಮ ಗಾಂಧೀಜಿಯವರಿಗೆ ನೀಡಿದ್ದ ಬೆಂಬಲ ಇಲ್ಲಿ ಸಾಮಾನ್ಯವಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆಯುತ್ತಿವೆ. 2017ನೇ ವರ್ಷವನ್ನು ನಾವು ಸಂಕಲ್ಪ ವರ್ಷವಾಗಿಸಬೇಕು. ಆಗಸ್ಟ್ ತಿಂಗಳನಲ್ಲಿ ನಾವು ಸಂಕಲ್ಪ ಮಾಡಬೇಕು. ಮುಂದಿನ 5 ವರ್ಷಗಳಲ್ಲಿ ನವ ಭಾರತಕ್ಕಾಗಿ ಏನಾದರೂ ಮಾಡಬೇಕೆಂಬ ಸಂಕಲ್ಪವನ್ನು ಮಾಡಬೇಕಿದೆ. 

2002ರ ವೇಳೆಗೆ ನವ ಭಾರತವನ್ನು ಕಟ್ಟಬೇಕಿದೆ. ದೇಶವನ್ನು ಬಡತನ, ಭಯೋತ್ಪಾದನೆ, ಜಾತಿ, ಕೋಮು ಪಿಡುಗುಗಳಿಂದ ಮುಕ್ತಗೊಳಿಸಲು ಪ್ರತಿಯೊಬ್ಬರೂ ಶ್ರಮ ಪಡೋಣ, ಸಾಧಿಸಿ ತೋರಿಸೋಣ ಎಂದಿದ್ದಾರೆ. 

ದೇಶಕ್ಕಾಗಿ ನಾವಿಂದು ಸಾಯಬೇಕಿಲ್ಲ. ದೇಶಕ್ಕಾಗಿ ಬದುಕಬೇಕಿದೆ...ದೇಶವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ. ಆಗಸ್ಟ್ 15 ರಂದು ದೇಶದ ಪ್ರಧಾನ ಸೇವಕನಾಗಿರುವ ನನಗೆ ಕೆಂಪು ಕೋಟೆಯಲ್ಲಿ ದೇಶದ ಜನತೆಯನ್ನುದ್ದೇಶಿ ಮಾತನಾಡುವ ಅವಕಾಶ ದೊರಕಿದೆ. ಆ.15ರಂದು ನಾನು ಮಾತನಾಡುವಾಗ ನಾನು ಕೇವಲ ಮಧ್ಯಮ ವ್ಯಕ್ತಿಯಾಗಿರುತ್ತೇನೆ. ದೇಶದ ಜನತೆಯ ದನಿಯನ್ನು ಪ್ರತಿಧ್ವನಿಸುತ್ತೇನೆಂದು ತಿಳಿಸಿದ್ದಾರೆ. 

ರಕ್ಷಾಬಂಧನ, ಜನ್ಮಾಷ್ಠಮಿ, ಗಣೇಶ ಚತುರ್ಥಿ, ಚೌತಿ ಚಂದ್ರ, ಅನಂತ ಚತುರ್ದಶಿ, ದುರ್ಗಾ ಪೂಜೆ, ದೀಪಾವಳಿ ಹೀಗೆ ಒಂದಾದ ನಂತರ ಒಂದು ಹಬ್ಬಗಳು ಬರುತ್ತವೆ. ನಮ್ಮ ಹಬ್ಬಗಳು ಬಡಜನರಿಗೆ ಆರ್ಥಿಕ ಅವಕಾಶಗಳನ್ನು ಕಲ್ಪಿಸುತ್ತದೆ ಎಂದಿದ್ದಾರೆ. 

ನಮ್ಮ ದೇಶದ ಹೆಣ್ಣು ಮಕ್ಕಳು ದೇಶವನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಇತ್ತೀಚೆಗಷ್ಟೇ ನಾನು ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯನ್ನು ಭೇಟಿ ಮಾಡಿದ್ದೆ. ಐಸಿಸಿ ಮಹಿಳಾ ವಿಶ್ವಕಪ್ ನಲ್ಲಿ ಗೆಲವು ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಅವರು ಬೇಸರು ವ್ಯಕ್ತಪಡಿಸಿದ್ದರು. ಆದರೆ, ಇಡೀ ದೇಶದ ಜನತೆ ಅವರ ಸೋಲನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ದೇಶದ ಜನತೆಯ ಹೃದಯವನ್ನು ಗೆದ್ದಿದ್ದಾರೆ. ಇದು ಅವರ ಅತ್ಯಂತ ಗೆಲುವಾಗಿದೆ. ನಮ್ಮ ದೇಶವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ ಎಂಬುದನ್ನು ಮತ್ತೊಮ್ಮೆ ಹೇಳಲು ಇಚ್ಛಿಸುತ್ತೇನೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com