ನೌಕಾಪಡೆಗೆ ಆನೆ ಬಲ: ಐಎನ್ ಎಸ್ ವಿಕ್ರಮಾದಿತ್ಯ ನೌಕೆಗಾಗಿ 57 ಹೊಸ ಯುದ್ಧ ವಿಮಾನಗಳ ಖರೀದಿ!

ಅತ್ತ ಚೆನ್ನೆನಲ್ಲಿ ಮಾನವ ರಹಿತ ಯುದ್ಧ ಟ್ಯಾಂಕರ್ ಮಂತ್ರ ಅನಾವರಣವಾಗುತ್ತಿದ್ದಂತೆಯೇ ಇತ್ತ ಭಾರತದ ಸಮುದ್ರ ಗಡಿ ಬಲ ಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಭಾರತದ ಪ್ರಮುಖ ಯುದ್ಧ ವಿಮಾನ ವಾಹಕ ಐಎನ್ ಎಸ್ ವಿಕ್ರಮಾಧ್ಯಿತ್ಯ ನೌಕೆಗಾಗಿ ಬರೊಬ್ಬರಿ 57 ಯುದ್ಧ ವಿಮಾನಗಳ ಖರೀದಿಗೆ ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಅತ್ತ ಚೆನ್ನೆನಲ್ಲಿ ಮಾನವ ರಹಿತ ಯುದ್ಧ ಟ್ಯಾಂಕರ್ ಮಂತ್ರ ಅನಾವರಣವಾಗುತ್ತಿದ್ದಂತೆಯೇ ಇತ್ತ ಭಾರತದ ಸಮುದ್ರ ಗಡಿ ಬಲ ಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಭಾರತದ ಪ್ರಮುಖ ಯುದ್ಧ ವಿಮಾನ ವಾಹಕ  ಐಎನ್ ಎಸ್ ವಿಕ್ರಮಾಧ್ಯಿತ್ಯ ನೌಕೆಗಾಗಿ ಬರೊಬ್ಬರಿ 57 ಯುದ್ಧ ವಿಮಾನಗಳ ಖರೀದಿಗೆ ಮುಂದಾಗಿದೆ.

ಸಮುದ್ರದ ಗಡಿ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವ ನೌಕಾಪಡೆಯನ್ನು ಇನ್ನಷ್ಟು ಸದೃಢಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಐಎನ್​ಎಸ್ ವಿಕ್ರಮಾದಿತ್ಯ ನೌಕೆಯ ಮೇಲೆ 57 ಯುದ್ಧ ವಿಮಾನಗಳನ್ನು ನಿಯೋಜಿಸಲು  ಸಿದ್ಧತೆ ನಡೆಸಿದೆ. ಈ ಯುದ್ಧ ವಿಮಾನಗಳನ್ನು ವಿದೇಶಗಳಿಂದ ಖರೀದಿಸಲು ನಿರ್ಧರಿಸಲಾಗಿದ್ದು, ಆಸಕ್ತ ರಾಷ್ಟ್ರಗಳಿಗೆ ವಿಕ್ರಮಾದಿತ್ಯ ನೌಕೆಯ ಮೇಲೆ ವಿಮಾನಗಳ ಸಾಮರ್ಥ್ಯ ಪ್ರದರ್ಶಿಸಲೂ ಆಹ್ವಾನ ನೀಡಲಾಗಿದೆ ಎಂದು  ತಿಳಿದುಬಂದಿದೆ.

ವಿಕ್ರಮಾದಿತ್ಯ ನೌಕೆಯ ಮೇಲೆ ಯುದ್ಧ ವಿಮಾನಗಳ ನಿಯೋಜನೆ ಸಮುದ್ರದ ಗಡಿ ರಕ್ಷಣೆಯಲ್ಲಿ ಮಹತ್ವದ ಕ್ರಮವಾಗಿರುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದ್ದು, ಅದರಂತೆ ಕೇಂದ್ರ ಸರ್ಕಾರ ವಿದೇಶಿ ಕಂಪನಿಗಳೊಂದಿಗೆ  ಸುಮಾರು 75 ಸಾವಿರ ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಯುದ್ಧವಿಮಾನ ಖರೀದಿಸಲು ಮುಂದಾಗಿದೆ.

ಮೂಲಗಳ ಪ್ರಕಾರ ಫ್ರಾನ್ಸ್​ನ ರಫೇಲ್, ರಷ್ಯಾದ ಮಿಗ್-29, ಅಮೆರಿಕದ-ಎಂ 18 ಸಮರ ನೌಕೆ ಖರೀದಿಸುವ ನಿಟ್ಟಿನಲ್ಲಿ ಮಾತುಕತೆ ಭಾರತ ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಈ ಪೈಕಿ ಈಗಾಗಲೇ  ಫ್ರಾನ್ಸ್​ನ ರಫೇಲ್, ಸ್ವೀಡಿಷ್ ಸಾಬ್ ಸೀ ಗ್ರಿಪೆನ್ ಹಾಗೂ ಅಮೆರಿಕದ ಎಂ-18 ವಿಮಾನ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಲ್ಗೊಂಡಿವೆ. ಆದರೆ ಸಂಪೂರ್ಣ ತೃಪ್ತಿ ಹೊಂದದ ನೌಕಾಪಡೆ, ನೌಕೆಯ ಮೇಲೆ ವಿಮಾನಗಳು  ನಿಲುಗಡೆಯಾಗುವ ಹಾಗೂ ಟೇಕ್​ಆಫ್ ಆಗುವ ವಿಧಾನಗಳ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಕೋರಿದೆ. ಅಂತೆಯೇ ರಷ್ಯಾ ಹಾಗೂ ಪಾಶ್ಚಿಮಾತ್ಯ ದೇಶಗಳ ಯುದ್ಧ ವಿಮಾನಗಳ ಟೇಕ್ ಆಫ್ ಆಗುವ ವಿಧಾನ ಸಂಪೂರ್ಣವಾಗಿ  ವ್ಯತ್ಯಾಸವಿರುವುದರಿಂದ, ಅವುಗಳು ವಿಕ್ರಮಾದಿತ್ಯ ನೌಕೆಯ ಮೇಲೆ ಯಶಸ್ವಿಯಾಗಿ ಕಾರ್ಯನಿರ್ವಹಿಸಬಲ್ಲವೇ ಎಂಬುದನ್ನು ಸೇನೆ ಖಚಿತಪಡಿಸಿಕೊಳ್ಳಬೇಕಿದೆ.

ಕಾರವಾರದಲ್ಲಿ ತಾಲೀಮು
ಫ್ರಾನ್ಸ್ ಹಾಗೂ ಅಮೆರಿಕದ ಯುದ್ಧ ವಿಮಾನಗಳ ಪ್ರಯೋಗವನ್ನು ಕರ್ನಾಟಕದ ಕಾರವಾರದಲ್ಲಿನ ಸೀಬರ್ಡ್ ನೌಕಾನೆಲೆಯಲ್ಲಿ ನಡೆಸಲಾಗಿತ್ತು. ಹೊಸದಾಗಿ ಸೇರ್ಪಡೆಯಾಗುವ 57 ಯುದ್ಧ ವಿಮಾನಗಳ ಪ್ರಯೋಗವನ್ನೂ ಕಾರವಾರ  ದಲ್ಲೇ ನಡೆಸುವ ಸಾಧ್ಯತೆ ಇದೆ. ರಷ್ಯಾದಿಂದ ಆಮದು ಮಾಡಿಕೊಳ್ಳ ಲಾಗಿರುವ 45 ಮಿಗ್-29 ವಿಮಾನಗಳೂ ಕೂಡ ಪಾಲ್ಗೊಳ್ಳಲಿವೆ ಎಂದು ತಿಳಿದುಬಂದಿದೆ.

3 ವರ್ಷದಲ್ಲಿ ವಿಮಾನಗಳ ಪೂರೈಕೆ ಸಾಧ್ಯತೆ
ನೌಕಾಪಡೆ ಮೂಲಗಳ ಪ್ರಕಾರ, ಒಪ್ಪಂದ ಏರ್ಪಟ್ಟ 3 ವರ್ಷಗಳಲ್ಲಿ ಮೊದಲ ಬ್ಯಾಚ್​ ನ ವಿಮಾನಗಳು ಪೂರೈಕೆಯಾಗಲಿವೆ ಎಂದು ಹೇಳಲಾಗುತ್ತಿದ್ದು, ಮತ್ತೆ ಮುಂದಿನ 3 ವರ್ಷಗಳಲ್ಲಿ ಉಳಿದ ಎಲ್ಲ ಯುದ್ಧ ವಿಮಾನಗಳು  ನೌಕೆಯನ್ನು ಸೇರಲಿವೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com