ರಕ್ಷಾ ಬಂಧನ: ಅಮೇಥಿಯ ಮಹಿಳೆಯರಿಗೆ ಸೋದರರಿಂದ ಶೌಚಾಲಯ ಉಡುಗೊರೆ!

ಸೋದರ-ಸೋದರಿಯರ ಭಾತೃತ್ವದ ಹಬ್ಬ ರಕ್ಷಾ ಬಂಧನ ಹಬ್ಬಕ್ಕೆ ಇನ್ನು ಒಂದು ವಾರ ಉಳಿದಿದೆ. ರಾಖಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಅಮೇಥಿ: ಸೋದರ-ಸೋದರಿಯರ ಭಾತೃತ್ವದ ಹಬ್ಬ ರಕ್ಷಾ ಬಂಧನ ಹಬ್ಬಕ್ಕೆ ಇನ್ನು ಒಂದು ವಾರ ಉಳಿದಿದೆ. ರಾಖಿ ಹಬ್ಬದ ದಿನ ಸಹೋದರ ಸಹೋದರಿಗೆ ರಾಖಿ ಕಟ್ಟಿದಾಗ ಸೋದರ ಏನಾದರೊಂದು ಉಡುಗೊರೆ ನೀಡುವುದು ವಾಡಿಕೆ.
 ಈ ಬಾರಿಯ ರಕ್ಷಾ ಬಂಧನವನ್ನು ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಜನ ವಿಭಿನ್ನವಾಗಿ ಆಚರಿಸುತ್ತಿದ್ದಾರೆ. ಅದು ರಾಖಿ ಕಟ್ಟಿದ ಸೋದರಿಗೆ ಶೌಚಾಲಯವನ್ನು ನೀಡುವ ಮೂಲಕ. 
ಬಯಲು ಶೌಚ ಮುಕ್ತಗೊಳಿಸಲು ಮತ್ತು ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಸ್ವಚ್ಛತ ಸಮಿತಿ ಅನೊಖಿ ಅಮೆಥಿ ಕ ಅನೊಖ ಬಾಯ್ ಎಂಬ ಕಾರ್ಯಕ್ರಮವನ್ನು ಆರಂಭಿಸಿದೆ.
ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆಗೆ ವಿವರ ನೀಡಿದ ಅಮೇಥಿಯ ಮುಖ್ಯ ಅಭಿವೃದ್ಧಿ ಅಧಿಕಾರಿ ಅಪೂರ್ವ ದುಬೆ, ಜಿಲ್ಲೆಯ ವಿವಿಧ ಬ್ಲಾಕ್ ಗಳ 854 ಜನರು ಜಿಲ್ಲಾ ಸಮಿತಿಯಲ್ಲಿ ಸೋದರರೆಂದು ತಾವೇ ಹೆಸರು ದಾಖಲಿಸಿಕೊಂಡು ರಕ್ಷಾ ಬಂಧನದ ಸಮಯದಲ್ಲಿ ತಮ್ಮ ಸೋದರಿಯರಿಗೆ ಶೌಚಾಲಯವನ್ನು ಉಡುಗೊರೆ ನೀಡುತ್ತಿದ್ದಾರೆ. ಹೆಸರು ದಾಖಲಿಸಿಕೊಂಡ ಸೋದರರು ತಾವೇ ಹಣ ಹಾಕಿ ಶೌಚಾಲಯವನ್ನು ಕಟ್ಟಿಸಿಕೊಡುತ್ತಾರೆ ಎಂದು ಹೇಳಿದರು.
ನಂತರ, ಲಕ್ಕಿ ಡ್ರಾವನ್ನು ಇಡಲಾಗುತ್ತಿದ್ದು, ಮೂವರಿಗೆ ಬಹುಮಾನ ನೀಡಲಾಗುತ್ತದೆ. 50,000ದವರೆಗೆ ನಗದು ಬಹುಮಾನ ಮತ್ತು ಮೊಬೈಲ್ ನ್ನು ಗೆದ್ದವರಿಗೆ ಬಹುಮಾನವಾಗಿ ನೀಡಲಾಗುತ್ತದೆ.
ಶೌಚಾಲಯ ನಿರ್ಮಾಣವನ್ನು ಅಧಿಕಾರಿಗಳ ತಂಡ ಪರಿಶೀಲಿಸಲಿದ್ದು , ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಲಕ್ಕಿ ವಿಜೇತರಿಗೆ ಪ್ರಶಸ್ತಿ ನೀಡಲಾಗುತ್ತದೆ. 
ಸ್ವಚ್ಛತೆಯ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್, ಮುಖ್ಯ ಅಭಿವೃದ್ಧಿ ಅಧಿಕಾರಿ ಮತ್ತು ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಇರುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com