ಡೋಕ್ಲಾಮ್ ವಿವಾದದ ನಡುವೆಯೇ ಉತ್ತರಾಖಂಡ್ ನ ಚಮೋಲಿಗೆ ಚೀನಾ ಸೇನೆ ಪ್ರವೇಶ!

ಸಿಕ್ಕಿಂ ನ ಡೊಕ್ಲಾಮ್ ನಲ್ಲಿ ಚೀನಾ- ಭಾರತದ ನಡುವೆ ವಿವಾದ ಉಂಟಾಗಿರುವುದರ ನಡುವೆಯೇ ಉತ್ತರಾಖಂಡ್ ನ ಚಿಮೋಲಿಗೆ ಚೀನಾ ಸೇನೆ ಪ್ರವೇಶಿಸಿರುವುದರ ಬಗ್ಗೆ ವರದಿ ಪ್ರಕಟವಾಗಿದೆ.
ಉತ್ತರಾಖಂಡ್ ನ ಚಿಮೋಲಿಗೆ ಚೀನಾ ಸೇನೆ ಪ್ರವೇಶ!
ಉತ್ತರಾಖಂಡ್ ನ ಚಿಮೋಲಿಗೆ ಚೀನಾ ಸೇನೆ ಪ್ರವೇಶ!
ನವದೆಹಲಿ: ಸಿಕ್ಕಿಂ ನ ಡೊಕ್ಲಾಮ್ ನಲ್ಲಿ ಚೀನಾ- ಭಾರತದ ನಡುವೆ ವಿವಾದ ಉಂಟಾಗಿರುವುದರ ನಡುವೆಯೇ ಉತ್ತರಾಖಂಡ್ ನ ಚಮೋಲಿಗೆ  ಚೀನಾ ಸೇನೆ ಪ್ರವೇಶಿಸಿರುವುದರ ಬಗ್ಗೆ ವರದಿ ಪ್ರಕಟವಾಗಿದೆ. 
ಜುಲೈ 26 ರಂದು ಚೀನಾ ಚಿಮೋಲಿ ಜಿಲ್ಲೆಯ ಬಾರಾಹೋತಿಗೆ ಚೀನಾ ಸೇನಾ ಸಿಬ್ಬಂದಿಗಳು ಅಕ್ರಮ ಪ್ರವೇಶ ಮಾಡಿದ್ದಾರೆ. ಜು.19 ರಂದೂ ಇದೇ ರೀತಿಯ ಘಟನೆ ನಡೆದಿದ್ದು, ಶಸ್ತ್ರಸಜ್ಜಿತರಾಗಿ ಸಂಚರಿಸಿರುವುದು ಬೆಳಕಿಗೆ ಬಂದಿದೆ. ಚಿಮೋಲಿ ಜಿಲ್ಲೆಯ ಮ್ಯಾಜಿಸ್ಟ್ರೇಟ್, ಐಟಿಬಿಪಿ ಸಿಬ್ಬಂದಿಗಳು ಚೀನಾ ಸೇನೆಯನ್ನು ವಾಪಸ್ ಕಳಿಸಿದ್ದಾರೆ. ಈ ವೇಳೆ ಚಿಮೋಲಿಯಲ್ಲಿರುವ ಪ್ರದೇಶ ತಮ್ಮದೆಂದು ಚೀನಾ ಪ್ರತಿಪಾದಿಸಿದೆ ಎಂದು ತಿಳಿದುಬಂದಿದೆ. 
ಇನ್ನು ಮತ್ತೊಂದು ಘಟನೆಯಲ್ಲಿ ಪಿಎಲ್ಎ ಭಾರತದ ವಾಯುಗಡಿಯನ್ನೂ ಸಹ ಉಲ್ಲಂಘನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಭಾರತೀಯ ವಾಯುಗಡಿಯನ್ನು ಉಲ್ಲಂಘಿಸಿ ಚೀನಾ ವಿಮಾನಗಳು 5 ನಿಮಿಷ ಹಾರಾಟ ನಡೆಸಿದ್ದು, ವಾಪಸ್ ತೆರಳಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com