ಇಂಗ್ಲಿಷ್ ಗೊತ್ತಿಲ್ಲದ್ದಕ್ಕೆ ಗೇಲಿಗೊಳಗಾಗಿದ್ದ ರೈತನ ಮಗ ಯುಪಿಎಸ್ ಸಿಯಲ್ಲಿ 3ನೇ ರ್ಯಾಂಕ್ ಪಡೆದ

ಒಂದು ಸಲ ಇಂಗ್ಲಿಷ್ ಗೊತ್ತಿಲ್ಲ ಎಂಬ ಕಾರಣಕ್ಕೆ ಗೇಲಿಗೊಳಗಾಗಿದ್ದ ರೈತನ ಮಗ ಗೋಪಾಲ ಕೃಷ್ಣ ರೋನಂಕಿ ಅವರು ಯುಪಿಎಸ್ ಸಿ...
ನಂದಿನಿ ಕೆ.ಆರ್ ಅವರನ್ನು ಅಭಿನಂದಿಸುತ್ತಿರುವ ಸಚಿವರು
ನಂದಿನಿ ಕೆ.ಆರ್ ಅವರನ್ನು ಅಭಿನಂದಿಸುತ್ತಿರುವ ಸಚಿವರು
ನವದೆಹಲಿ: ಒಂದು ಸಲ ಇಂಗ್ಲಿಷ್ ಗೊತ್ತಿಲ್ಲ ಎಂಬ ಕಾರಣಕ್ಕೆ ಗೇಲಿಗೊಳಗಾಗಿದ್ದ ರೈತನ ಮಗ ಗೋಪಾಲಕೃಷ್ಣ ರೋನಂಕಿ ಅವರು ಯುಪಿಎಸ್ ಸಿ ಪರೀಕ್ಷೆಯಲ್ಲಿ ಮೂರನೇ ರ್ಯಾಂಕ್ ಪಡೆಯುವ ಮೂಲಕ ದೇಶ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ.
ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ 30 ವರ್ಷದ ಗೋಪಾಲಕೃಷ್ಣ ಅವರು ಅತ್ಯಂತ ಬಡತನದ ಕುಟುಂಬದಿಂದ ಬಂದಿದ್ದಾರೆ. 
ಯುಪಿಎಸ್ ಸಿ ಪರೀಕ್ಷೆಯಲ್ಲಿ ದೇಶಕ್ಕೆ ಮೂರನೇ ರ್ಯಾಂಕ್ ಪಡೆದ ನಂತರ ತಮ್ಮ ಸಂತೋಷವನ್ನು ಹಂಚಿಕೊಂಡಿರುವ ರೋನಂಕಿ ಅವರು, ತನ್ನ ತಂದೆ-ತಾಯಿ ಬದುಕುವುದಕ್ಕಾಗಿ ಯಾವ ರೀತಿ ಕಷ್ಟಪಡುತ್ತಿದ್ದಾರೆ ಎಂಬುದನ್ನು ನಾವು ನೋಡಿದ್ದೇನೆ. ಹೀಗಾಗಿ ನನ್ನ ಕುಟುಂಬಕ್ಕಾಗಿ ಹಾಗೂ ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕು ಎಂದು ನಾನು ಸದಾ ಹಂಬಲಿಸುತ್ತಿದ್ದೆ. ಹೀಗಾಗಿ ನಾನು ಐಎಎಸ್ ಮಾಡಬೇಕು ಎಂದು ನಿರ್ಧರಿಸಿದೆ ಎಂದಿದ್ದಾರೆ.
ಐಎಎಸ್ ಅಧಿಕಾರಿಯಾಗಬೇಕು ಎಂಬುದು ನನ್ನ ಕನಸಾಗಿತ್ತು. ಅದೊಂದು ಅತ್ಯಂತ ಗೌರವಯುತ ಹುದ್ದೆ. ಶಿಕ್ಷಣ ಕ್ಷೇತ್ರಕ್ಕೆ ವಿಶೇಷವಾಗಿ ಆಂಧ್ರಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಎಂಬುದು ನನ್ನ ಗುರಿಯಾಗಿದೆ ಎಂದು ರೋನಂಕಿ ತಿಳಿಸಿದ್ದಾರೆ.
ಬುಧವಾರ ಪ್ರಕಟಗೊಂಡ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ರಾಜ್ಯದ ನಂದಿನಿ ಕೆ.ಆರ್. ಸೇರಿದಂತೆ ಟಾಪ್ 20 ರ್ಯಾಂಕ್ ಪಡೆದ ಅಭ್ಯರ್ಥಿಗಳನ್ನು ಇಂದು ದೆಹಲಿಯಲ್ಲಿ ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜೀತೇಂದ್ರ ಸಿಂಗ್ ಅವರು ಸನ್ಮಾನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com