ವ್ಯಾಪಂ ಹಗರಣ: ಸಿಬಿಐ ನಿಂದ ಎರಡು ಪ್ರತ್ಯೇಕ ಚಾರ್ಜ್ ಶೀಟ್

ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಗ್ವಾಲಿಯರ್ ಕೋರ್ಟ್ ಗೆ ಇಬ್ಬರು ಅಭ್ಯರ್ಥಿಗಳು ಹಾಗೂ ಮೂವರು ಮಧ್ಯವರ್ತಿಗಳ ವಿರುದ್ಧ
ಸಿಬಿಐ
ಸಿಬಿಐ
ನವದೆಹಲಿ: ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಗ್ವಾಲಿಯರ್ ಕೋರ್ಟ್ ಗೆ ಇಬ್ಬರು ಅಭ್ಯರ್ಥಿಗಳು ಹಾಗೂ ಮೂವರು ಮಧ್ಯವರ್ತಿಗಳ ವಿರುದ್ಧ ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಸಿದೆ.
ಎರಡು ಪ್ರಕರಣಗಳಲ್ಲಿಯೂ ವಂಚನೆ, ಫೋರ್ಜರಿ ಸೇರಿದಂತೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಕಾಯಿದೆ ಅನ್ವಯ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಸುಪ್ರೀಂಕೋರ್ಟ್ ಸೂಚನೆಯ ಮೇರೆಗೆ ತನಿಖೆ ನಡೆಸುತ್ತಿರುವ ಸಿಬಿಐ ಸೆಕ್ಷನ್ 66ಡಿ ಐಟಿ ಕಾಯಿದೆಯಡಿ ಫೆಬ್ರವರಿ 24 2013 ರಂದು ಅಭ್ಯರ್ಥಿಗಳ ವಿರುದ್ಧ ಕೇಸು ದಾಖಲಿಸಿತ್ತು. ಆರೋಪಿತ ಅಭ್ಯರ್ಥಿಗೆ ಎರಡು ರೋಲ್ ನಂಬರ್ ಗಳನ್ನು ನೀಡಲಾಗಿತ್ತು. ಸಬ್ ಇನ್ಸ್ ಪೆಕ್ಟರ್, ಸುಬೇದಾರ್, ಪ್ಲಾಟೂನ್  ಕಮಾಂಡರ್ ಸೇರಿದಂತೆ ಎಲ್ಲರಿಗೂ ಅರ್ಜಿ ನೀಡಲಾಗಿತ್ತು ಎಂದು ಎಫ್ ಐ ಆರ್ ನಲ್ಲಿ ದಾಖಲಿಸಲಾಗಿತ್ತು.
16ನೇ ಸೆಪ್ಟಂಬರ್ 2012 ರಂದು ನಡೆದ ಪರೀಕ್ಷೆಯಲ್ಲಿ ಆರೋಪಿತ ಅಭ್ಯರ್ಥಿ ಸ್ವತಃ ಪರೀಕ್ಷೆಗೆ ಹಾಜರಾಗಿದ್ದ, ಜೊತೆಗೆ ಇನ್ನೊಂದು ರೋಲ್ ನಂಬರ್ ನಲ್ಲಿ ತನ್ನ ಸಂಬಂಧಿಯ ಹಾಜರಾಗಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com