ಕಾಣೆಯಾದ ಜೆ ಎನ್ ಯು ವಿದ್ಯಾರ್ಥಿ ನಜೀಬ್ ಅಹ್ಮದ್ ಪ್ರಕರಣದಲ್ಲಿ ಎಫ್ ಐ ಆರ್ ದಾಖಲಿಸಿದ ಸಿ ಬಿ ಐ

ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ (ಜೆ ಎನ್ ಯು) ಕಾಣೆಯಾದ ವಿದ್ಯಾರ್ಥಿ ನಜೀಬ್ ಅಹ್ಮದ್ ಪ್ರಕರಣದಲ್ಲಿ ತನಿಖೆಗಾಗಿ ಸಿಬಿಐ ಎಫ್ ಐ ಆರ್ ದಾಖಲಿಸಿದೆ. ಎಬಿವಿಪಿ ವಿದ್ಯಾರ್ಥಿಗಳ ಜೊತೆಗಿನ
ನಜೀಬ್ ಅಹ್ಮದ್
ನಜೀಬ್ ಅಹ್ಮದ್
ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ (ಜೆ ಎನ್ ಯು) ಕಾಣೆಯಾದ ವಿದ್ಯಾರ್ಥಿ ನಜೀಬ್ ಅಹ್ಮದ್ ಪ್ರಕರಣದಲ್ಲಿ ತನಿಖೆಗಾಗಿ ಸಿಬಿಐ ಎಫ್ ಐ ಆರ್ ದಾಖಲಿಸಿದೆ. ಎಬಿವಿಪಿ ವಿದ್ಯಾರ್ಥಿಗಳ ಜೊತೆಗಿನ ಗಲಾಟೆಯ ನಂತರ ಏಳು ತಿಂಗಳ ಹಿಂದೆ ನಜೀಬ್ ಕಾಣೆಯಾಗಿದ್ದರು. 
ಮೇ ೧೬ ರಂದು ದೆಹಲಿ ಹೈಕೋರ್ಟ್ ಅಹ್ಮದ್ ಪ್ರಕರಣವನ್ನು ದೆಹಲಿ ವಿಶೇಷ ಕ್ರೈಮ್ ಬ್ರಾಂಚ್ ಪೊಲೀಸರಿಂದ ಸಿಬಿಐಗೆ ಹಸ್ತಾಂತರಿಸಿದ ಮೇಲೆ ಶುಕ್ರವಾರ ಸಿಬಿಐ ಎಫ್ ಐ ಆರ್ ದಾಖಲಿಸಿದೆ. 
ಅಕ್ಟೊಬರ್ ೧೪-೧೫ ರಂದು ಜೆ ಎನ್ ಯು ಹಾಸ್ಟೆಲ್ ನಿಂದ ಕಾಣೆಯಾದಾಗಲಿಂದಲೂ ೨೭ ವರ್ಷದ ಎಂ ಎಸ್ ಸಿ ವಿದ್ಯಾರ್ಥಿ ನಜೀಬ್ ಪತ್ತೆಯಾಗಿಲ್ಲ. 
ನಜೀಬ್ ಕಾಣೆಯಾಗಿರುವುದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಎಬಿವಿಪಿ ಹೇಳಿದೆ. 
ನಾವು ಪಾರದರ್ಶಕವಾಗಿ ತನಿಖೆ ನಡೆಸಿದ್ದರೂ ಯಶಸ್ಸು ಸಿಕ್ಕಿಲ್ಲ ಎಂದು ದೆಹಲಿ ಪೊಲೀಸರು ಹೈಕೋರ್ಟ್ ಗೆ ತಿಳಿಸಿದ ಮೇಲೆ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿ ಕೋರ್ಟ್ ತೀರ್ಪು ನೀಡಿತ್ತು. 
ತಮ್ಮ ಮಗನನ್ನು ದೆಹಲಿ ಸರ್ಕಾರ ಮತ್ತು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಬೇಕು ಎಂದು ಕೋರಿ ನಜೀಬ್ ತಾಯಿ ಫಾತಿಮಾ ನಫೀಸ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com