ಅರುಂಧತಿ ರಾಯ್ ಕುರಿತ ನನ್ನ ಟ್ವೀಟ್'ಗೆ ವಿಷಾದ ವ್ಯಕ್ತಪಡಿಸಲ್ಲ: ರಾವಲ್

ಅರುಂಧತಿ ರಾಯ್ ಕುರಿತ ಹೇಳಿಕೆ ಸುದ್ದಿ ಸುಳ್ಳಾಗಿದ್ದರೂ, ಟ್ವೀಟ್ ಕುರಿತಂತೆ ನಾನು ವಿಷಾದ ವ್ಯಕ್ತಪಡಿಸುವುದಿಲ್ಲ ಬಾಲಿವುಡ್ ಹಿರಿಯ ನಟ ಹಾಗೂ ಬಿಜೆಪಿ ಸಂಸದ ಪರೇಷ್ ರಾವಲ್...
ಬಾಲಿವುಡ್ ಹಿರಿಯ ನಟ ಹಾಗೂ ಬಿಜೆಪಿ ಸಂಸದ ಪರೇಷ್ ರಾವಲ್
ಬಾಲಿವುಡ್ ಹಿರಿಯ ನಟ ಹಾಗೂ ಬಿಜೆಪಿ ಸಂಸದ ಪರೇಷ್ ರಾವಲ್
ನವದೆಹಲಿ: ಅರುಂಧತಿ ರಾಯ್ ಕುರಿತ ಹೇಳಿಕೆ ಸುದ್ದಿ ಸುಳ್ಳಾಗಿದ್ದರೂ, ಟ್ವೀಟ್ ಕುರಿತಂತೆ ನಾನು ವಿಷಾದ ವ್ಯಕ್ತಪಡಿಸುವುದಿಲ್ಲ ಬಾಲಿವುಡ್ ಹಿರಿಯ ನಟ ಹಾಗೂ ಬಿಜೆಪಿ ಸಂಸದ ಪರೇಷ್ ರಾವಲ್ ಅವರು ಶನಿವಾರ ಹೇಳಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ರಾವಲ್ ಅವರು, ಸೇನಾ  ಜೀಪ್ ಗಳಿಗೆ ಕಾಶ್ಮೀರದ ಕಲ್ಲು ತೂರಾಟಗಾರರನ್ನು ಕಟ್ಟುವ ಬದಲು ಅರುಂಧತಿ ರಾಯ್ ಅವರನ್ನು ಕಟ್ಟಿಹಾಕಬೇಕಿತ್ತು ಎಂದು ಹೇಳಿದ್ದರು. ಈ ಹೇಳಿಕೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ನಂತರ ವರದಿಗಳು ಸುಳ್ಳು ಎಂದು ಹೇಳಲಾಗುತ್ತಿತ್ತು. 
ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ರಾವಲ್ ಅವರು, ಅರುಂಧತಿ ರಾಯ್ ಕುರಿತ ವರದಿಗಳು ಸುಳ್ಳಾಗಿದ್ದರೂ ನನಗೆ ಈ ಬಗ್ಗೆ ಯಾವುದೇ ರೀತಿಯ ವಿಷಾದವಿಲ್ಲ. ರಾಯ್ ಅವರನ್ನು ಸೇನಾ ಜೀಪಿಗೆ ಕಟ್ಟಿಹಾಕಿದ್ದರೂ, ಕಲ್ಲು ತೂರಾಟಗಾರರು ಅವರ ಮೇಲೆ ದಾಳಿ ಮಾಡುತ್ತಿರಲಿಲ್ಲ. ಏಕೆಂದರೆ ರಾಯ್ ಅವರು ಕಲ್ಲು ತೂರಾಟಗಾರರ ಸಿದ್ಧಾಂತಗಳನ್ನು ಬೆಂಬಲ ವ್ಯಕ್ತಪಡಿಸುತ್ತಾರೆಂದು ಹೇಳಿದ್ದಾರೆ. 
ಉದಾರ ಮನಸ್ಸಿನ ಜನರು ಇದೇ ರೀತಿಯ ಪ್ರತಿಕ್ರಿಯೆಗಳನ್ನೇ ನೀಡುತ್ತಾರೆಂದು ನಾನು ಊಹಿಸಿದ್ದೆ. ಸೇನಾ ಯೋಧರ ಬಗ್ಗೆ ಅರುಂಧಿತಿ ರಾಯ್ ಅವರು ಮಾತನಾಡಿದಾಗ ಆಗ ಏಕೆ ಇತರರರು ಎನನ್ನೂ ಮಾತನಾಡುವುದಿಲ್ಲ? ಅರುಂಧತಿ ರಾಯ್ ಸರಿಯಿದ್ದಾರೆಂದು ಹೇಳುವುದಾದರೆ, ನಾನು ಕೂಡ ಸರಿಯಾಗಿಯೇ ಇದ್ದೇನೆ. ಆಕೆ ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದರೆ, ನಾನೂ ಕೂಡ ವಿಷಾದ ವ್ಯಕ್ತಪಡಿಸುತ್ತೇನೆ. ಸುಳ್ಳು ಸುದ್ದಿಯನ್ನು ನಾನು ನಂಬುತ್ತೇನೆ. 2002ರ ಗೋದ್ರಾ ಹತ್ಯೆ ಬಗ್ಗೆ ರಾಯ್ ಅವರು ಯಾವ ರೀತಿ ಹೇಳಿಕೆ ನೀಡಿದ್ದರು? ನಿಮಗೆ ವಾಕ್ ಸ್ವಾತಂತ್ರ್ಯ ಇದೆ ಎಂದಾದರೆ, ನನಗೂ ಆ ಸ್ವಾತಂತ್ರ್ಯವಿದೆ ಎಂದು ತಿಳಿಸಿದ್ದಾರೆ. 
ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಇತರೆ ರಾಜಕೀಯ ಗಣ್ಯರ ಬಗ್ಗೆ ಯಾರು ಬೇಕಾದರೂ ಬಹಿರಂಗವಾಗಿ ಏನನ್ನು ಬೇಕಾದರೂ ಹೇಳಲಿ ಆದರೆ, ಸೇನೆಯನ್ನೇಕೆ ಗುರಿ ಮಾಡಬೇಕು. ನಿಮಗೆ ಧೈರ್ಯವಿರುವುದೇ ಆದರೆ, ಮಮತಾ ಬ್ಯಾನರ್ಜಿಯವರ ಬಗ್ಗೆ ಮಾತನಾಡಿ. ಸೇನೆ ನಿಮ್ಮ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂಬ ಕಾರಣಕ್ಕೆ ಮಾತುನಾಡುತ್ತಿದ್ದಾರೆ. ನಾವು ಮಾತನಾಡಲು ಆರಂಭಿಸಿದರೆ ಮಹಿಳೆ ಎಂದು ಹೇಳುತ್ತಾರೆ. ಹೇಳಿಕೆ ನೀಡುವಾಗ ಅವರು ಮಹಿಳೆಯಾಗಿರುವುದಿಲ್ಲವೇ...? ಇದು ನನ್ನ ದೇಶ ಹಾಗೂ ನನ್ನ ಸೇನೆಗೆ ಸಂಬಂಧಿಸಿದ್ದಾಗಿದ್ದು, ನಾನು ಈ ಬಗ್ಗೆ ಕ್ಷಮೆಯಾಚಿಸುವುದಿಲ್ಲ. ಅರುಂಧತಿ ರಾಯ್ ಅವರನ್ನು ಜೀಪಿಗೆ ಕಟ್ಟಿದರೂ ಯಾರೂ ಅವರ ಮೇಲೆ ಕಲ್ಲು ತೂರುವುದಿಲ್ಲ. ಏಕೆಂದರೆ, ಕಲ್ಲು ತೂರಾಟಗಾರರ ಸಿದ್ಧಾಂತಗಳನ್ನೇ ಅವರೂ ಅನುಸರಿಸುತ್ತಿದ್ದಾರೆ. ಶಾಂತಿಯೆಂಬ ಪಾರಿವಾಳವನ್ನು ಕಳುಹಿಸಿದ್ದೇನೆ. ಇದರಲ್ಲಿ ಹಿಂಸಾಚಾರವಿಲ್ಲ. 

ಕಲ್ಲು ತೂರಾಟಗಾರರ ದಾಳಿಯಿಂದಾಗಿ 2,500 ಯೋಧರು ಗಾಯಗೊಂಡಿದ್ದರು. ಆಗ ರಾಯ್ ಅವರು ಯಾವುದೇ ಹೇಳಿಕೆಗಳನ್ನು ನೀಡಿರಲಿಲ್ಲ. ಆಗೇಕೆ ಮಾನವ ಹಕ್ಕುಗಳ ಬಗ್ಗೆ ಮಾತನಾಡಲಿಲ್ಲ? ಯೋಧರಿಗೆ ಕುಟುಂಬವಿರವುದಿಲ್ಲವೇ? ಯೋಧರು ಹುತಾತ್ಮರಾಗಿರುವುದು ಸ್ಪಷ್ಟವಾಗಿತ್ತು. ಆದರೆ, ನಿಮ್ಮ ಪ್ರತಿಕ್ರಿಯೆ ಮಾತ್ರ ಅಸ್ಪಷ್ಟವಾಗಿತ್ತು ಎಂದು ಅರುಂಧತಿ ರಾಯ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com