ಗೋರಕ್ಷಣೆ ಆದೇಶವನ್ನು ರಾಜಕೀಯ ಮಾಡಲಾಗುತ್ತಿದೆ: ಭಯ್ಯಾ ಜೋಶಿ

ಗೋರಕ್ಷಣೆ ವಿಚಾರವನ್ನು ರಾಜಕೀಯ ಮಾಡಲಾಗುತ್ತಿದ್ದು, ಇದೀಗ ಈ ವಿಚಾರ ಸೂಕ್ಷ್ಮವಾಗಿ ಹೋಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ಭಯ್ಯಾ ಜೋಶಿ..
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ಭಯ್ಯಾ ಜೋಶಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ಭಯ್ಯಾ ಜೋಶಿ
ಪುಣೆ: ಗೋರಕ್ಷಣೆ ವಿಚಾರವನ್ನು ರಾಜಕೀಯ ಮಾಡಲಾಗುತ್ತಿದ್ದು, ಇದೀಗ ಈ ವಿಚಾರ ಸೂಕ್ಷ್ಮವಾಗಿ ಹೋಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ಭಯ್ಯಾ ಜೋಶಿ ಭಾನುವಾರ ಹೇಳಿದ್ದಾರೆ. 
ಆರ್'ಎಸ್ಎಸ್ ಸಂಘಟನೆ ಮೊದಲ ಮತ್ತು ಎರಡನೇ ವರ್ಷದ ತರಬೇತಿ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಗೋರಕ್ಷಣೆ ವಿಚಾರವನ್ನು ರಾಜಕೀಯ ಮಾಡಲಾಗಿದೆ ಹಾಗೂ ಇದೀಗ ವಿಚಾರ ಸೂಕ್ಷ್ಮವಾಗಿದ್ದು, ಘರ್ಷಣೆಗಳು ಎದುರಾಗುವಂತೆ ಮಾಡುತ್ತಿದೆ ಎಂದು ಹೇಳಿದ್ದಾರೆ. 
ಗೋ ರಕ್ಷಣೆ ಯಾವುದೇ ಧರ್ಮ ಅಥವಾ ಯಾವುದೇ ಪ್ರತ್ಯೇಕ ಸಮುದಾಯಕ್ಕೆ ವಿರುದ್ಧವಾಗಿಲ್ಲ. ಪ್ರಾಚೀನ ಕಾಲದಿಂದಲೂ ದೇಶದಲ್ಲಿ ಕೃಷಿ ಸಮುದಾಯದವರು ಕೃಷಿ ಹಾಗೂ ಆರ್ಥಿಕ ಬೆಳವಣಿಗೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಸಂಘಟನೆ ಮಾತುಕತೆ ಮೇಲೆ ನಂಬಿಕೆಯಿಟ್ಟಿದೆಯೇ ವಿನಃ ಘರ್ಷಣೆ ಮೇಲಲ್ಲ. ಘರ್ಷಣೆ ಬದಲಾಗಿ,  ಮಾತುಕತೆ ಹಾಗೂ ಸಹಕಾರದ ಸಹಾಯದೊಂದಿಗೆ ಸಮಸ್ಯೆಗಳು ಬಗೆಹರಿಸುತ್ತವೆಂದು ನಾವು ತಿಳಿದಿದ್ದೇವೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com