ಯುದ್ಧ ಭೂಮಿಯಲ್ಲೂ ಮಹಿಳೆಯರಿಗೆ ಅವಕಾಶ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಲಿಂಗ ತಾರತಮ್ಯ ನಿವಾರಿಸುವುದಕ್ಕಾಗಿ ಭಾರತೀಯ ಸೇನೆ ಯುದ್ಧದ ಸಂದರ್ಭಗಳಲ್ಲೂ ಮಹಿಳೆಯರನ್ನು ಮುಂಚೂಣಿಗೆ ತರಲು...
ಜನರಲ್ ಬಿಪಿನ್ ರಾವತ್
ಜನರಲ್ ಬಿಪಿನ್ ರಾವತ್
ನವದೆಹಲಿ: ಲಿಂಗ ತಾರತಮ್ಯ ನಿವಾರಿಸುವುದಕ್ಕಾಗಿ ಭಾರತೀಯ ಸೇನೆ ಯುದ್ಧದ ಸಂದರ್ಭಗಳಲ್ಲೂ ಮಹಿಳೆಯರನ್ನು ಮುಂಚೂಣಿಗೆ ತರಲು ನಿರ್ಧರಿಸಿದ್ದು, ಜಾಗತಿಕವಾಗಿ ಕೆಲವೇ ರಾಷ್ಟ್ರಗಳು ಸೇನೆಯಲ್ಲಿ ಈ ಲಿಂಗ ತಾರತಮ್ಯ ತೆಗೆದು ಹಾಕಿವೆ.
ಯುದ್ಧ ಭೂಮಿಯಲ್ಲಿ ಮಹಿಳೆಯರಿಗೂ ಪಾತ್ರ ನೀಡುವುದಕ್ಕಾಗಿ ಸೇನೆಗೆ ಮಹಿಳೆಯರ ನೇಮಕಾತಿ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಭಾನುವಾರ ತಿಳಿಸಿದ್ದಾರೆ.
ಭಾರತೀಯ ಸೇನೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸಲು ಮಹಿಳೆಯರೂ ಆಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಈ ಪ್ರಕ್ರಿಯೆಯನ್ನು ಆರಂಭಿಸುತ್ತೇವೆ. ಮೊದಲ ಹಂತದಲ್ಲಿ ಸೇನಾ ಪೊಲೀಸ್ ಪೇದೆಗಳ ನೇಮಕಾತಿ ನಡೆಸಲಾಗುವುದು ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.
ಪ್ರಸ್ತೂತ ಸೇನೆಯ ವೈದ್ಯಕೀಯ, ಕಾನೂನು, ಶೈಕ್ಷಣಿಕ ಹಾಗೂ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಮಹಿಳೆಯರಿಗೆ ಪ್ರಾಶಸ್ತ್ಯ ನೀಡಲಾಗಿದೆ. ಆದರೆ ಕಾಳಜಿ ಹಾಗೂ ವ್ಯವಸ್ಥಾಪನಾ ಸಮಸ್ಯೆಗಳಿಂದ ಯುದ್ಧಭೂಮಿಯ ಕಾರ್ಯಾಚರಣೆಯ ಮಿತಿಯಿಂದ ಮಹಿಳೆಯರನ್ನು ದೂರವಿಡಲಾಗಿತ್ತು ಎಂದು ರಾವತ್ ಅವರು ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com