ತನಿಖಾ ಸಂಸ್ಥೆಗಳು ಹೂಡಿರುವ ಸಾಮೂಹಿಕ ಬೇಟೆ ವಿರುದ್ಧ ಹೋರಾಟ: ಎನ್ ಡಿಟಿವಿ ಹೇಳಿಕೆ

ಸಿಬಿಐ ಮತ್ತು ಇತರ ತನಿಖಾ ಸಂಸ್ಥೆಗಳು ನಮ್ಮ ವಿರುದ್ಧ ಹೂಡಿರುವ ಸಾಮೂಹಿಕ ಬೇಟೆ ವಿರುದ್ಧ ...
ಪ್ರಣಾಯ್ ರಾಯ್
ಪ್ರಣಾಯ್ ರಾಯ್
ನವದೆಹಲಿ: ಸಿಬಿಐ ಮತ್ತು  ಇತರ ತನಿಖಾ ಸಂಸ್ಥೆಗಳು ನಮ್ಮ ವಿರುದ್ಧ ಹೂಡಿರುವ ಸಾಮೂಹಿಕ ಬೇಟೆ ವಿರುದ್ಧ ಹೋರಾಡುತ್ತೇವೆ. ಭಾರತದಲ್ಲಿ  ಪ್ರಜಾಸತ್ತೆ ಮತ್ತು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯಾವುದೇ ರೀತಿಯ ಪ್ರಯತ್ನಗಳಿಗೆ ಹೆದರುವುದಿಲ್ಲ” ಎಂದು ಸಿಬಿಐ ದಾಳಿಗೆ ಎನ್‍ಡಿಟಿವಿ ಪ್ರತಿಕ್ರಿಯೆ ನೀಡಿದೆ.
ಖಾಸಗಿ ಬ್ಯಾಂಕಿಗೆ ನಷ್ಟ ಉಂಟು ಮಾಡಿದ ಆರೋಪದ ಮೇರೆಗೆ ಕೇಂದ್ರ ತನಿಖಾ ದಳ ಎನ್ ಡಿಟಿವಿಯ ಸಹ ಸಂಸ್ಥಾಪಕ ಪ್ರಣಾಯ್ ರಾಯ್ ಮನೆ ಮೇಲೆ ದಾಳಿ ನಡೆಸಿ ಕೇಸು ದಾಖಲಿಸಿದ ಸ್ವಲ್ಪ ಹೊತ್ತಿನ ಬಳಿಕ ಸುದ್ದಿ ವಾಹಿನಿ ಈ ಹೇಳಿಕೆ ನೀಡಿದೆ.
ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಕಿರುಕುಳ ಹಳೆಯ ಆರೋಪಗಳನ್ನು ಕೆದಗಿ ಶೋಧ ನಡೆಸಿ ಕೇಸು ದಾಖಲಿಸಿದ್ದಾರೆ. ಎನ್ ಡಿಟಿವಿ ಮತ್ತು ಅದರ ಪ್ರವರ್ತಕರು ನಿರಂತರವಾಗಿ ಇದರ ವಿರುದ್ಧ ಹೋರಾಡಲಿದೆ. ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಮುಕ್ತ ಅಭಿಪ್ರಾಯಕ್ಕೆ ಬೆಲೆ ಇದ್ದು ಇಂತಹ ಆಪಾದನೆಗಳಿಗೆ ಹೆದರುವುದಿಲ್ಲ, ಹೋರಾಡುತ್ತೇವೆ,  ದೇಶದ ಸ್ವಾತಂತ್ರ್ಯಕ್ಕಾಗಿ ಇಂತಹ ದುಷ್ಟ ಶಕ್ತಿಗಳ ವಿರುದ್ಧ ಶಕ್ತಿ ಮೀರಿ ಹೋರಾಡುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com