ವಿಜಯಪುರದಲ್ಲಿ ಗರ್ಭಿಣಿ ಮಹಿಳೆ ಹತ್ಯೆ: ಶೀಘ್ರ ಕಾನೂನು ಜಾರಿಗೆ ಒತ್ತಾಯ

ದಲಿತ ಯುವಕನನ್ನು ಮದುವೆಯಾಗಿದ್ದನ್ನು ವಿರೋಧಿಸಿ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯನ್ನು ....
ಮಹಿಳಾ ಕಾರ್ಯಕರ್ತೆಯರು
ಮಹಿಳಾ ಕಾರ್ಯಕರ್ತೆಯರು
ಮುಂಬೈ: ದಲಿತ ಯುವಕನನ್ನು ಮದುವೆಯಾಗಿದ್ದನ್ನು ವಿರೋಧಿಸಿ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯನ್ನು  ಸುಟ್ಟು ಹಾಕಿದ ಮರ್ಯಾದಾ ಹತ್ಯೆಗೆ ಸಂಬಂಧಪಟ್ಟಂತೆ ಶಿಕ್ಷೆ ನೀಡಲು ಭಾರತೀಯ ದಂಡ ಸಂಹಿತೆಯಡಿಯಲ್ಲಿ ವಿಶೇಷ ಸೆಕ್ಷನ್ ನ ಶಾಸನವನ್ನು ಕೂಡಲೇ ಜಾರಿಗೆ ತರಬೇಕೆಂದು ಮಹಿಳಾ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡಿದ ನ್ಯಾಯವಾದಿ ಹಾಗೂ ಕಾರ್ಯಕರ್ತೆ ಅಭಾ ಸಿಂಗ್, ಕರ್ನಾಟಕದಲ್ಲಿ ನಡೆದಿರುವ ಘಟನೆ ನೋಡಿದರೆ ಕೋಮುವಾದಿಗಳ ಮೇಲೆ ದೌರ್ಜನ್ಯವೆಸಗುವ  ಪ್ರವೃತ್ತಿ ಕಂಡುಬರುತ್ತಿದೆ. ಮರ್ಯಾದಾ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದು ಉತ್ತರ ಭಾರತದಲ್ಲಾಗಿರಲಿ, ದಕ್ಷಿಣ ಭಾರತದಲ್ಲಾಗಿರಲಿ ಮರ್ಯಾದಾ ಹತ್ಯೆ ಘಟನೆಗಳು ಇಡೀ ದೇಶದಲ್ಲಿ ಜಾಸ್ತಿಯಾಗುತ್ತಿದೆ. ಕೋಮು ದೌರ್ಜನ್ಯದ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿದ್ದರೂ ರಾಜಕೀಯ ಪಕ್ಷಗಳಿಗೆ ಮತ್ತು ಸರ್ಕಾರಗಳಿಗೆ ಮರ್ಯಾದಾ ಹತ್ಯೆಗೆ ನಿರ್ದಿಷ್ಟ ಶಿಕ್ಷೆ ವಿಧಿಸುವ ಕಾನೂನು ಕೂಡ ಇಲ್ಲ.  ಪ್ರಸ್ತುತ ಭಾರತದ ಕಾನೂನಿನಲ್ಲಿ ಮರ್ಯಾದಾ ಹತ್ಯೆಯನ್ನು ಕೊಲೆ ಎಂದು ಪರಿಗಣಿಸಲಾಗುತ್ತದೆ. ಭಾರತೀಯ ದಂಡ ಸಂಹಿತೆಯಡಿ ಮರ್ಯಾದಾ ಹತ್ಯೆಗೆ ವಿಶೇಷ ಸೆಕ್ಷನ್ ನನ್ನು ಸಂಸತ್ತಿನಲ್ಲಿ ಕೂಡಲೇ ಶಾಸನವಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.
ಇಂತಹದೇ ಅಭಿಪ್ರಾಯವನ್ನು ಹಂಚಿಕೊಂಡ ಮತ್ತೊಬ್ಬ ಮಹಿಳಾ ಕಾರ್ಯಕರ್ತೆ ನಿರ್ಮಲಾ ಸಮಂತ್, ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು,  ಆಗ ಸಮಾಜಕ್ಕೆ ಕಠಿಣ ಸಂದೇಶ ನೀಡಿದಂತಾಗುತ್ತದೆ ಎಂದರು.
ಘೋರ ಮರ್ಯಾದಾ ಹತ್ಯೆ ಘಟನೆಯೊಂದರಲ್ಲಿ, ದಲಿತ ಯುವಕನನ್ನು ಮದುವೆಯಾದದ್ದಕ್ಕಾಗಿ ವಿಜಯಪುರದಲ್ಲಿ 21 ವರ್ಷದ ಬಾನು ಬೇಗಮ್ ನನ್ನು ಆಕೆಯ ಕುಟುಂಬಸ್ಥರು ಬೆಂಕಿ ಹಚ್ಚಿ ಕೊಂದಿದ್ದಾರೆ. ಬೇಗಮ್ ಅದೇ ಗ್ರಾಮದ 24 ವರ್ಷದ ಯುವಕ ಸಾಯಬಣ್ಣ ಶರಣಪ್ಪ ಕೊನ್ನೂರ್ ನನ್ನು ಪ್ರೀತಿಸಿ ಮದುವೆಯಾಗಿದ್ದಳು.
ಬಾನುವಿನ ತಾಯಿ, ಸೋದರಿ, ಸೋದರ ಮತ್ತು ಬಾವನನ್ನು ಪೊಲೀಸರು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com