70 ವರ್ಷಗಳಲ್ಲೇ ಮೊದಲು: ಭಾರತೀಯ ಸೈನಿಕರಿಗೆ ಶೀಘ್ರ ಸ್ವದೇಶಿ ಬುಲೆಟ್‌ ಪ್ರೂಫ್‌ ಜಾಕೆಟ್‌!

ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಸೇನೆಯ ದಶಕಗಳ ಕನಸಾದ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಶೀಘ್ರದಲ್ಲೇ ಭಾರತದಲ್ಲೇ ಉತ್ಪಾದಿಸುವ ಕಾಲ ಸನ್ನಿಹಿತವಾಗಿದೆ.
ವಿಜ್ಞಾನಿ ಶಾಂತನು ಭೌಮಿಕ್ ಮತ್ತು ಬುಲೆಟ್ ಪ್ರೂಫ್ ಜಾಕೆಟ್
ವಿಜ್ಞಾನಿ ಶಾಂತನು ಭೌಮಿಕ್ ಮತ್ತು ಬುಲೆಟ್ ಪ್ರೂಫ್ ಜಾಕೆಟ್

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಸೇನೆಯ ದಶಕಗಳ ಕನಸಾದ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಶೀಘ್ರದಲ್ಲೇ ಭಾರತದಲ್ಲೇ ಉತ್ಪಾದಿಸುವ ಕಾಲ ಸನ್ನಿಹಿತವಾಗಿದೆ.

ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವಂತೆ, ಪ್ರಸ್ತುತ ಭಾರತೀಯ ಸೇನೆಗೆ ಅಮೆರಿಕದಿಂದ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ತರಿಸಿಕೊಳ್ಳಲಾಗುತ್ತಿದ್ದು, ಇದೀಗ ಈ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಇನ್ನು ಮುಂದೆ ಭಾರತದಲ್ಲೇ ತಯಾರಿಸಲಾಗುತ್ತದೆ. ಹೌದು..ಪಶ್ಚಿಮ  ಬಂಗಾಳದ ವಿಜ್ಞಾನಿಯೊಬ್ಬರು ಅಗ್ಗದ ಮತ್ತು ಕಡಿಮೆ ತೂಕದ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಸಂಶೋಧಿಸಿದ್ದು, ಇದಕ್ಕೆ ಕೇಂದ್ರ ಸರ್ಕಾರ ಕೂಡ ಅನುಮೋದನೆ ನೀಡಿದೆ. ಫ್ರೊಫೆಸರ್ ಶಾಂತನು ಭೌಮಿಕ್ ಎಂಬ ವಿಜ್ಞಾನಿಗಳು ಈ  ವಿಭಿನ್ನ ಬುಲೆಟ್ ಪ್ರೂಫ್ ಜಾಕೆಟ್ ಅನ್ನು ಸಂಶೋಧಿಸಿದ್ದು, ಇದು ಕೇವಲ 1.5 ಕೆಜಿ ತೂಕ ಹೊಂದಿದೆ.

ಪ್ರಸ್ತುತ ಸೈನಿಕರು ಬಳಕೆ ಮಾಡುತ್ತಿರುವ ಬುಲೆಟ್ ಪ್ರೂಫ್ ಜಾಕೆಟ್ ಗಳು 15ರಿಂದ 18 ಕೆಜಿ ತೂಕ ಹೊಂದಿದ್ದು, ಇವುಗಳನ್ನು ಧರಿಸಿ ಕಾರ್ಯಾಚರಣೆಯಲ್ಲಿ ತೊಡಗುವುದು ಕಷ್ಟಕರ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೆ  ವಿಜ್ಞಾನಿ ಶಾಂತನು ಭೌಮಿಕ್ ಅವರು ಸಿದ್ಧಪಡಿಸಿರುವ ಈ ಜಾಕೆಟ್ ಶೇ.8ರಷ್ಟು ಕಡಿಮೆ ತೂಕ ಹೊಂದಿದ್ದು, ಅಂದರೆ ಕೇವಲ 1.5 ಕೆಜಿ ತೂಕ ಹೊಂದಿದೆ. ಈ ಜಾಕೆಟ್ ಗಳು 20 ಲೇಯರ್ ಗಳನ್ನು ಹೊಂದಿದ್ದು, ಇದಲ್ಲದೆ ಜಾಕೆಟ್ ನಲ್ಲಿ  ಕಾರ್ಬನ್ ಫೈಬರ್ ಬಳಕೆ ಮಾಡಲಾಗಿದೆ. ಹೀಗಾಗಿ ಈ ಜಾಕೆಟ್ 57 ಡಿಗ್ರಿ ಸೆಲ್ಸಿಯಸ್ ಉಷ್ಟಾಂಶವನ್ನೂ ಕೂಡ ತಡೆದುಕೊಂಡು ಕಾರ್ಯ ನಿರ್ವಹಿಸಬಲ್ಲದಾಗಿದೆ.

ಕೇಂದ್ರ ಸರ್ಕಾರಕ್ಕೆ ವಾರ್ಷಿಕ 20 ಸಾವಿರ ಕೋಟಿ ರು. ಉಳಿತಾಯ
ಇನ್ನು ಈ ಬುಲೆಟ್ ಪ್ರೂಫ್ ಜಾಕೆಟ್ ಗಳು ಕಡಿಮೆ ವೆಚ್ಚದ್ದಾಗಿದ್ದು, ಒಂದು ಜಾಕೆಟ್ ನಿರ್ಮಾಣಕ್ಕೆ ಕೇವಲ 50 ಸಾವಿರ ರು. ವೆಚ್ಚ ತಗುಲುತ್ತದೆ. ಆದರೆ ಅಮೆರಿಕದ ಜಾಕೆಟ್ ಗಳಿಗೆ 1.50 ಲಕ್ಷ ರು. ವೆಚ್ಚವಾಗುತ್ತಿದೆ. ಈ ಜಾಕೆಟ್ ಗಳ  ಬಳಕೆಗೆ ರಕ್ಷಣಾ ಸಚಿವಾಲಯದ ಉನ್ನತಾಧಿಕಾರ ಸಮಿತಿ ಕೂಡ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಯೋಧರು ಸಂಪೂರ್ಣವಾಗಿ ಭಾರತದಲ್ಲೇ ತಯಾರಾದ ಬುಲೆಟ್‌ ಪ್ರೂಫ್‌  ಜಾಕೆಟ್‌ ಅನ್ನು ಧರಿಸಲು ಹಾದಿ ಸುಗಮವಾದಂತಾಗಿದೆ. ಜತೆಗೆ ರಕ್ಷಣಾ ಇಲಾಖೆಯ ಬೊಕ್ಕಸಕ್ಕೆ ಪ್ರತಿ ವರ್ಷ 20 ಸಾವಿರ ಕೋಟಿ ರು. ಉಳಿತಾಯವಾಗಲಿದೆ.

ಸೇನೆ ಹಾಗೂ ಅರೆಸೇನಾ ಪಡೆಗಳಿಗಾಗಿ ಕೇಂದ್ರ ಸರ್ಕಾರ ಅಮೆರಿಕದಿಂದ ಗುಂಡು ನಿರೋಧಕ ಕವಚಗಳನ್ನು ಖರೀದಿಸುತ್ತಿದೆ. ಈ ಒಂದು ಕವಚಕ್ಕೆ 1.5 ಲಕ್ಷ ರು. ಬೆಲೆ ಇದೆ. ಜತೆಗೆ ಒಂದು ಕವಚ 15ರಿಂದ 18 ಕೆ.ಜಿ.ವರೆಗೂ  ತೂಕವಿದೆ. ಇಷ್ಟು ಮಣ ಭಾರದ ಜಾಕೆಟ್‌ ಧರಿಸಿ ಉಗ್ರರ ಜತೆ ಕಾದಾಡಬೇಕಾದ ಪರಿಸ್ಥಿತಿ ಯೋಧರಿಗಿದೆ. ಇದನ್ನು ಮನಗಂಡ ಬಂಗಾಳಿ ವಿಜ್ಞಾನಿ ಪ್ರೊ| ಶಂತನು ಭೌಮಿಕ್‌ ಅತ್ಯಂತ ಕಡಿಮೆ ತೂಕದ, ಥರ್ಮೋ ಪ್ಲಾಸ್ಟಿಕ್‌ ಜಾಕೆಟ್‌  ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಜಾಕೆಟ್‌ ಬೆಲೆ ರು.50 ಸಾವಿರವಿರಲಿದ್ದು, ತೂಕ 1.5 ಕೆ.ಜಿ. ಇರಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ‘ಮೇಕ್‌ ಇನ್‌ ಇಂಡಿಯಾ' ಮಂತ್ರ ಜಪಿಸುತ್ತಿರುವಾಗಲೇ ಬಂಗಾಳಿ ವಿಜ್ಞಾನಿ ಶಾಂತನು ಭೌಮಿಕ್ ಅವರು ಕಡಿಮೆ ಬೆಲೆಯ, ಅತ್ಯಂತ ಕಡಿಮೆ ತೂಕದ ಸ್ವದೇಶಿ ‘ಬುಲೆಟ್‌ಪ್ರೂಫ್‌'  ಜಾಕೆಟ್‌ವೊಂದನ್ನು ಅಭಿವೃದ್ಧಿಪಡಿಸಿರಿರುವುದು ಶ್ಲಾಘನಾರ್ಹವಾಗಿದೆ.

ಯಾರು ಈ ವಿಜ್ಞಾನಿ ಶಾಂತನು ಭೌಮಿಕ್?
ಪ್ರಸ್ತುತ ಭಾರತೀಯ ಯೋಧರಿಗೆ ಅಗ್ಗದ ಮತ್ತು ಕಡಿಮೆ ತೂಕದ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಸಂಶೋಧಿಸಿರುವ ವಿಜ್ಞಾನಿ ಶಾಂತನು ಭೌಮಿಕ್ ಮೂಲತಃ ಬಂಗಾಳ ಮೂಲದವರಾಗಿದ್ದು, ಪ್ರಸ್ತುತ ಕೊಯಮತ್ತೂರಿನ ಅಮೃತ ವಿಶ್ವವಿದ್ಯಾಲಯದಲ್ಲಿ ಏರೇಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇನ್ನು ತಮ್ಮ ವಿನೂತನ ಸಂಶೋಧನೆಯನ್ನು ವಿಜ್ಞಾನಿ ಶಾಂತನು ಭೌಮಿಕ್ ಅವರು ನೇತಾಜಿ ಸುಭಾಷ್ ಚಂದ್ರಬೋಸ್ ಅವರಿಗೆ ಸಮರ್ಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com