ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೆನಡಾ ಲೇಖಕ ತಾರೀಖ್ ಫತಾಹ್ ಹತ್ಯೆಗೆ ಸಂಚು: ಛೋಟಾ ಶಕೀಲ್ ಆಪ್ತನ ಬಂಧನ

ಪಾಕ್‌ ಸಂಜಾತ ಕೆನಡ ಲೇಖಕ ತಾರಿಕ್‌ ಫ‌ತಾಹ್‌ ಹತ್ಯಗೆ ಯೋಜನೆ ರೂಪಿಸಿದ್ದ ಛೋಟಾ ಶಕೀಲ್‌ ನ ನಿಕಟವರ್ತಿ ಜುನೇದ್‌ ಚೌಧರಿ ಎಂಬಾತನನ್ನು ದೆಹಲಿ ...
ನವದೆಹಲಿ: ಪಾಕ್‌ ಸಂಜಾತ ಕೆನಡ ಲೇಖಕ ತಾರಿಕ್‌ ಫ‌ತಾಹ್‌ ಹತ್ಯಗೆ ಯೋಜನೆ ರೂಪಿಸಿದ್ದ ಛೋಟಾ ಶಕೀಲ್‌ ನ ನಿಕಟವರ್ತಿ ಜುನೇದ್‌ ಚೌಧರಿ ಎಂಬಾತನನ್ನು ದೆಹಲಿ ಪೊಲೀಸ್‌ನ ವಿಶೇಷ ದಳ ಬಂಧಿಸಿದೆ.
ಜುನೇದ್‌ ನನ್ನು ಜೂನ್‌ 7 ಮತ್ತು 8ರ ನಡುವಿನ ರಾತ್ರಿ ಈಶಾನ್ಯ ದಿಲ್ಲಿಯ ವಝೀರಾಬಾದ್‌ ರಸ್ತೆಯಲ್ಲಿ ಸೆರೆ ಹಿಡಿಯಲಾಯಿತು ಎಂದು ಪೊಲೀಸ್‌ ಡೆಪ್ಯುಟಿ ಕಮಿಷನರ್‌ ಪಿ ಎಸ್‌ ಕುಶವಾಹ್‌ ತಿಲಿಸಿದ್ದಾರೆ.
ಜುನೇದ್‌ ಯಾರನ್ನು ಗುರಿ ಇರಿಸಿಕೊಂಡು ಕೊಲ್ಲುವ ಯೋಜನೆ ಹೊಂದಿದ್ದ ಎಂಬುದನ್ನು ತಿಳಿಸಲು ಡಿಸಿಪಿ ನಿರಾಕರಿಸಿದರಾದರೂ, ಅನಾಮಿಕ ಪೊಲೀಸ್‌ ಅಧಿಕಾರಿಯೋರ್ವರು, "ಜುನೇದ್‌ನ ಗುರಿ ಪಾಕ್‌ ಸಂಜಾತ ಕೆನಡ ಲೇಖಕ ತಾರಿಕ್‌ ಫ‌ತಾಹ್‌ ಆಗಿದ್ದರು' ಎಂದು ತಿಳಿಸಿದ್ದಾರೆ. ಫ‌ತಾಹ್‌ ಅವರು ಈ ಸಂದರ್ಭದಲ್ಲಿ  ದೆಹಲಿಯಲ್ಲಿ ಇಲ್ಲವಾದರೂ ಅವರನ್ನು ಕೊಲ್ಲುವ ಸಂಚು ರೂಪಿಸುವುದೇ ಜುನೇದ್‌ನ ಯೋಜನೆಯಾಗಿತ್ತು ಎಂದವರು ಹೇಳಿದರು. 
ಜುನೇದ್‌ ಚೌಧರಿಯನ್ನು ಇತರ ಮೂವರೊಂದಿಗೆ ಶಸ್ತ್ರಾಸ್ತ್ರ ಹಾಗೂ ಹವಾಲಾ ಹಣದ ಸಹಿತ ಕಳೆದ ಜೂನ್‌ನಲ್ಲೇ ಸೆರೆ ಹಿಡಿಯಲಾಗಿತ್ತು. ಆದರೆ ಈಗ ನಾಲ್ಕು ತಿಂಗಳ ಹಿಂದೆ ಜುನೇದ್‌ನನ್ನು ಜಾಮೀನಿನ  ಮೇಲೆ ಬಿಡುಗಡೆ ಮಾಡಲಾಗಿತ್ತು. ಆ ದಿನಗಳಲ್ಲಿ ಜುನೇದ್‌ ಮತ್ತು ಆತನ ಸಹಚರರು ಹಿಂದೂ ಸಭಾದ ಮುಖ್ಯಸ್ಥ ಸ್ವಾಮಿ ಚಕ್ರಪಾಣಿ ಅವರನ್ನು ಕೊಲ್ಲುವ ಸಂಚು ರೂಪಿಸುತ್ತಿದ್ದರು. 
ಆಗ ಜುನೇದ್‌ ಛೋಟಾ ಶಕೀಲ್‌ ನನ್ನು ಸಂಪರ್ಕಿಸಿದ್ದ. ಬೇಲ್‌ ರದ್ದಾದ ಬಳಿಕ ಆತನನ್ನು ತಿಹಾರ್‌ ಜೈಲಿಗೆ ಕಳುಹಿಸಲಾಗಿತ್ತು. ಅನಂತರ ಆತ ಪುನಃ ಬೇಲ್‌ ಪಡೆದು ಹೊರಬಂದಿದ್ದ ಮತ್ತು ಶಕೀಲ್‌ ಸಂಪರ್ಕ ಬೆಳೆಸಿಕೊಂಡಿದ್ದ. ಚೌಧರಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com