ಮುಂಬಯಿ: ಹಿಂದುತ್ವ ಪ್ರತಿಪಾದಿಸುವ ವ್ಯಕ್ತಿ ರಾಷ್ಟ್ರಪತಿಯಾಗಲಿ ಎಂದು ಶಿವಸೇನೆ ಪ್ರತಿಪಾದಿಸಿದೆ. ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಈ ವಿಷಯ ಪ್ರಕಟಿಸಿದ್ದು, ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ರಾಷ್ಟ್ರಪತಿಯಾಗಬೇಕೆಂದು ಹೇಳಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆ ಮೈತ್ರಿ ಸರ್ಕಾರ ರಚಿಸಿರುವ ಶಿವಸೇನೆ, ಹಿಂದುರಾಷ್ಟ್ರ ಹಾಗೂ ಆರ್ಟಿಕಲ್ 370 ರ ಅಡಿ ರಾಮ ಮಂದಿ ವಿವಾದವನ್ನು ಬಗೆಹರಿಸುವ ವ್ಯಕ್ತಿ ದೇಶದ ರಾಷ್ಟ್ರಪತಿಯಾಗಬೇಕೆಂದು ಹೇಳಿದೆ.
ಮುಂದಿನ ರಾಷ್ಟ್ರಪತಿ ಚುನಾವಣೆಯಲ್ಲಿ ಮೋಹನ್ ಭಾಗವತ್ ಅವರೇ ಆಯ್ಕೆಯಾಗ
ಬೇಕೆಂಬುದು ಶಿವಸೇನೆ ಬಯಕೆಯಾಗಿದೆ.
ಇದುವರೆಗೂ ರಾಷ್ಟ್ರಪತಿ ಭವನದಲ್ಲಿ ಜಾತ್ಯಾತೀತ ವ್ಯಕ್ತಿಗಳು ವಾಸವಿದ್ದರು, ಹೀಗಾಗಿ ಹಿಂದುತ್ವ ಬೆಂಬಲಿಸುವ ಹಾಗೂ ಪ್ರತಿಪಾದಿಸುವ ವ್ಯಕ್ತಿಯೇ ರಾಷ್ಟ್ರಪತಿಯಾಗಬೇಕೆಂದು ಲೇಖನದಲ್ಲಿ ಬರೆಯಲಾಗಿದೆ.
ಜುಲೈ 17 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ, ಆದರೆ ತಾವು ರಾಷ್ಟ್ರಪತಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಮೋಹನ್ ಭಾಗವತ್ ಸ್ಪಷ್ಟ ಪಡಿಸಿದ್ದಾರೆ.