ಕಾಮೆಡ್-ಕೆ ಕೌನ್ಸಿಲಿಂಗ್ ಜೂ.12 ಕ್ಕೆ ಮುಂದೂಡಿಕೆ

ಜೂ.09 ರಂದು ನಡೆಯಬೇಕಿದ್ದ ಕಾಮೆಡ್-ಕೆ ಕೌನ್ಸಿಲಿಂಗ್ ನ್ನು ಜೂ.12 ಕ್ಕೆ ಮುಂದೂಡಲಾಗಿದೆ. ನೀಟ್ ಫಲಿತಾಂಶ ಪ್ರಕಟವಾಗುವುದು ತಡವಾಗಿರುವ ಹಿನ್ನೆಲೆಯಲ್ಲಿ ಕಾಮೆಡ್-ಕೆ ಕೌನ್ಸಿಲಿಂಗ್ ನ್ನೂ ಮುಂದೂಡಲಾಗಿದೆ.
ಕಾಮೆಡ್-ಕೆ ಕೌನ್ಸಿಲಿಂಗ್
ಕಾಮೆಡ್-ಕೆ ಕೌನ್ಸಿಲಿಂಗ್
ಬೆಂಗಳೂರು: ಜೂ.09 ರಂದು ನಡೆಯಬೇಕಿದ್ದ ಕಾಮೆಡ್-ಕೆ ಕೌನ್ಸಿಲಿಂಗ್ ನ್ನು ಜೂ.12 ಕ್ಕೆ ಮುಂದೂಡಲಾಗಿದೆ. ನೀಟ್ ಫಲಿತಾಂಶ ಪ್ರಕಟವಾಗುವುದು ತಡವಾಗಿರುವ ಹಿನ್ನೆಲೆಯಲ್ಲಿ ಕಾಮೆಡ್-ಕೆ ಕೌನ್ಸಿಲಿಂಗ್ ನ್ನೂ ಮುಂದೂಡಲಾಗಿದೆ. 
ಆನ್ ಲೈನ್ ನ ಮೊದಲ ಸುತ್ತಿನ ಕೌನ್ಸಿಲಿಂಗ್ ನೋಂದಣಿ ಜೂ.12 ಕ್ಕೆ ಪ್ರಾರಂಭವಾಗಲಿದ್ದು, ಆಯ್ಕೆ ಪ್ರವೇಶ ಪ್ರಕ್ರಿಯೆ ಜೂ.12 ರಿಂದ 20 ವರೆಗೆ ನಡೆಯಲಿದೆ. 
ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾಮೆಡ್-ಕೆ ಕೌನ್ಸಿಲಿಂಗ್ ನ್ನು ಎರಡು ಬಾರಿ ಮುಂದೂಡಲಾಗಿದೆ, ನೀಟ್ ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ಕಾಮೆಡ್-ಕೆ ಕೌನ್ಸಿಲಿಂಗ್ ನ್ನು ಪ್ರಾರಂಭಿಸಿದರೆ ವಿದ್ಯಾರ್ಥಿಗಳು ಅನಿವಾರ್ಯವಾಗಿ ಇಂಜಿನಿಯರಿಂಗ್ ನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಕೌನ್ಸಿಲಿಂಗ್ ನ್ನು ಮುಂದೂಡಲಾಗಿದೆ ಎಂದು ಕಾಮೆಡ್-ಕೆ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com