ಚೆನ್ನೈ: ಪೊಯೆಸ್ ಗಾರ್ಡನ್ ಗೆ ದೀಪಾ ಜಯಕುಮಾರ್ ಗೆ ಪ್ರವೇಶ ನಿರಾಕರಣೆ

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಸೋದರನ ಪುತ್ರಿ ದೀಪಾ ಜಯಕುಮಾರ್ ಗೆ ಚೆನ್ನೈನಲ್ಲಿರುವ ಜಯಲಲಿತಾ ಅವರ...
ದೀಪಾ ಜಯಕುಮಾರ್
ದೀಪಾ ಜಯಕುಮಾರ್
Updated on
ನವದೆಹಲಿ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಸೋದರನ ಪುತ್ರಿ ದೀಪಾ ಜಯಕುಮಾರ್ ಗೆ ಚೆನ್ನೈನಲ್ಲಿರುವ ಜಯಲಲಿತಾ ಅವರ ನಿವಾಸ ಪೊಯೆಸ್ ಗಾರ್ಡನ್ ಗೆ ಪ್ರವೇಶಿಸಲು ಶಶಿಕಲಾ ಅವರ ಬೆಂಬಲಿಗ ಟಿಟಿವಿ ದಿನಕರನ್ ಮತ್ತು ಪೊಲೀಸರು ತಡೆದ ಘಟನೆ ಇಂದು ನಡೆದಿದೆ. ಇದರಿಂದ ಪೊಯೆಸ್ ಗಾರ್ಡನ್ ನಿವಾಸದ ಮುಂದೆ ಇಂದು ಹೈ ಡ್ರಾಮಾ ನಡೆದು ದೀಪಾ ಜಯಕುಮಾರ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.
ಜನರ ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟಾಗ ಪೊಯೆಸ್ ಗಾರ್ಡನ್ ನ ವೇದ ನಿಲಯಂ ನಿವಾಸದ ಹೊರಗೆ ಗೊಂದಲಕಾರಿ ವಾತಾವರಣ ಉಂಟಾದ ದೃಶ್ಯ ಕಂಡುಬಂತು.
ಜಯಲಲಿತಾ ಅವರ ಪೊಯೆಸ್ ಗಾರ್ಡ ನ್ ನ ನಿವಾಸ ಅವರ ನಿಧನದ ನಂತರ ಅವರ ಬಂಧುಗಳು ಮತ್ತು ಜಯಲಲಿತಾ ಆಪ್ತೆ ಶಶಿಕಲಾ ಬಣದ ನಡುವಿನ ಕಲಹದಿಂದ ವಿವಾದದ ತಾಣವಾಗಿಯೇ ಉಳಿದಿದೆ.
ತಮ್ಮ ಸೋದರ ದೀಪಕ್ ಅತ್ತೆ ಜಯಲಲಿತಾ ಅವರ ನಿವಾಸಕ್ಕೆ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಲು ಕರೆದಿದ್ದರು. ದೀಪಕ್ ತಾವು ಬರುವ ವೇಳೆಗೆ ಮನೆಯ ಒಳಗೆ ಇದ್ದರು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. 
ಇನ್ನು ಸುದ್ದಿ ವಾಹಿನಿಯೊಂದಕ್ಕೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ ದೀಪಕ್,  ತಾನು ಜಯಲಲಿತಾ ಅವರ ನಿವಾಸದ ಒಳಗಿರುವುದಾಗಿ ದೃಢಪಡಿಸಿದ್ದಾರೆ. ಪೊಯೆಸ್ ಗಾರ್ಡನ್ ನ ವೇದ ನಿಲಯ ಮನೆ ತಮಗೆ ಸೇರಿದ್ದು. ಜಯಲಲಿತಾ ಒಬ್ಬರೇ ನಮ್ಮ ಅತ್ತೆಯಾಗಿದ್ದು ಅವರ ನಿವಾಸ ನಮಗೆ ಸೇರಬೇಕು ಎಂದು ಹೇಳಿದ್ದಾರೆ.
ತಮ್ಮ ಸೋದರ ಮನೆಯಿಂದ ಹೊರಗೆ ಬರುವವರೆಗೆ ತಾವು ಈ ಜಾಗ ಬಿಟ್ಟು ಕದಲುವುದಿಲ್ಲ ಎಂದು ದೀಪಾ ಜಯಕುಮಾರ್ ಹೇಳಿದ್ದಾರೆ.
ಪೊಯೆಸ್ ಗಾರ್ಡನ್ ನ ವೇದ ನಿಲಯಂ 24,000 ಚದರಡಿಯ ಬಂಗಲೆಯಾಗಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಜಯಲಲಿತಾ ನಿಧನದ ನಂತರ ಅವರು ತಮ್ಮ ನಿವಾಸದ ಜಾಗಕ್ಕೆ ವಿಲ್ ಬರೆದಿಡಲಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ. ಇದರಿಂದಾಗಿ 90 ಕೋಟಿ ರೂಪಾಯಿಗೂ ಅಧಿಕ ಬೆಲೆ ಬಾಳುವ ಪೊಯೆಸ್ ಗಾರ್ಡನ್ ಗಾಗಿ ಜಯಲಲಿತಾ ಅವರ ಸಂಬಂಧಿಗಳು ಮತ್ತು ಶಶಿಕಲಾ ಬಣದ ನಡುವೆ ಕಿತ್ತಾಟ ನಡೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com