ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್
ದೇಶ
ರೈತರ ಕುರಿತ ಚೌಹಾಣ್ ಉಪವಾಸವೊಂದು 'ನಾಟಕ': ಕಾಂಗ್ರೆಸ್
ರಾಜ್ಯದಲ್ಲಿ ರೈತರ ಪ್ರತಿಭಟವೆ ವೇಳೆ ಉಂಟಾಗಿದ್ದ ಹಿಂಸಾಚಾರ ಹಿನ್ನಲೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕೈಗೊಂಡಿದ್ದ ಶಾಂತಿಯುತ ಉಪವಾಸವೊಂದು...
ಭೋಪಾಲ್: ರಾಜ್ಯದಲ್ಲಿ ರೈತರ ಪ್ರತಿಭಟವೆ ವೇಳೆ ಉಂಟಾಗಿದ್ದ ಹಿಂಸಾಚಾರ ಹಿನ್ನಲೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕೈಗೊಂಡಿದ್ದ ಶಾಂತಿಯುತ ಉಪವಾಸವೊಂದು ನಾಟಕವಾಗಿತ್ತು ಎಂದು ಕಾಂಗ್ರೆಸ್ ಸೋಮವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಪಿ.ಎಲ್. ಪುಣ್ಯ ಅವರು, ಮಂಡಸೌರ್ ಹಿಂಸಾಚಾರದಿಂದ ಅತ್ಯಂತ ನೋವು ಹಾಗೂ ಬೇಸರವನ್ನು ತಂದಿದೆ. ರಾಜ್ಯದಲ್ಲಿ ಇಷ್ಟೆಲ್ಲಾ ಆದರೂ ಮಧ್ಯಪ್ರದೇಶ ಮುಖ್ಯಮಂತ್ರಿಗಳು ಉಪವಾಸ ಮಾಡುವ ಮೂಲಕ ದೊಡ್ಡ ನಾಟಕವಾಡಿದ್ದಾರೆ. ಮುಖ್ಯಮಂತ್ರಿಗಳು ಉಪವಾಸ ಮಾಡಿದ್ದರೂ ಈಗಲೂ ರಾಜ್ಯದಲ್ಲಿ ರೈತರು ಅದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂದು ಹೇಳಿದ್ದಾರೆ.
ರೈತರ ಮೇಲಿನ ಗೋಲಿಬಾರ್ ಹಿನ್ನಲೆಯಲ್ಲಿ ರಾಜ್ಯದಲ್ಲಿ ಭುಗಿಲೆದ್ದಿದ್ದ ಹಿಂಸೆಯಿಂದ ನೊಂದಿರುವುದಾಗಿ ಹೇಳಿದ್ದ ಚೌಹಾಣ್ ಅವರು, ಶನಿವಾರ ಬೆಳಿಗ್ಗೆ 11 ಗಂಟೆಗೆ ಭೋಪಾಲ್ ನ ದಸರಾ ಮೈದಾನದಲ್ಲಿ ಉಪವಾಸ ಆರಂಭಿಸಿದ್ದರು. ಭಾನುವಾಹ ಮಧ್ಯಾಹ್ನ 3.30ರ ಸುಮಾರಿಗೆ ಮಾಜಿ ಮುಖ್ಯಮಂತ್ರಿ ಕೈಲಾಶ ಜೋಶಿ ಅವರು ಚೌಹಾಣ್ ಗೆ ಎಳನೀರು ಕುಡಿಸುವ ಮೂಲಕ ಉಪವಾಸಕ್ಕೆ ಮಂಗಳ ಹಾಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ