ರಾಜಸ್ಥಾನದಲ್ಲಿ ತಮಿಳುನಾಡು ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ೮ ಗೋರಕ್ಷಕರ ಬಂಧನ

ರಾಜಸ್ಥಾನದ ಬಾರ್ಮಾರ್ ಜಿಲ್ಲೆಯಲ್ಲಿ ಕಾನೂನುಬದ್ಧವಾಗಿ ಗೋವುಗಳನ್ನು ಸಾಗಾಣೆ ಮಾಡುತ್ತಿದ್ದ ತಮಿಳುನಾಡು ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಎಂಟು ಜನ ಗೋರಕ್ಷಕರನ್ನು ಬಂಧಿಸಿರುವುದಾಗಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಜೈಪುರ: ರಾಜಸ್ಥಾನದ ಬಾರ್ಮಾರ್ ಜಿಲ್ಲೆಯಲ್ಲಿ ಕಾನೂನುಬದ್ಧವಾಗಿ ಗೋವುಗಳನ್ನು ಸಾಗಾಣೆ ಮಾಡುತ್ತಿದ್ದ ತಮಿಳುನಾಡು ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಎಂಟು ಜನ ಗೋರಕ್ಷಕರನ್ನು ಬಂಧಿಸಿರುವುದಾಗಿ ಮಂಗಳವಾರ ಪೊಲೀಸರು ಹೇಳಿದ್ದಾರೆ.
ತಮಿಳುನಾಡಿಗೆ ಗೋವುಗಳನ್ನು ಕೊಂಡೊಯ್ಯಲಾಗುತ್ತಿದ್ದ ಟ್ರಕ್ ಗಳನ್ನು ಭಾನುವಾರ ರಾತ್ರಿ ಸುಮಾರು ೨೫೦ ಜನ ಗೋರಕ್ಷಕರು ತಡೆದು ಕಲ್ಲೆಸೆದಿದ್ದರು. ಈ ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ತೀವ್ರ ಗಾಯಗಳಾಗಿತ್ತು. 
ಐದು ಟ್ರಕ್ ಗಳಲ್ಲಿ ಸುಮಾರು ೫೦ ಹಸುಗಳನ್ನು ಮತ್ತು ೩೦ ಕರುಗಳನ್ನು ಸಾಗಾಣೆ ಮಾಡಲಾಗುತ್ತಿತ್ತು. 
"ನಾವು ೫೦ ವ್ಯಕ್ತಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದೇವೆ ಮಾತು ೮ ಜನರನ್ನು ಬಂಧಿಸಿದ್ದೇವೆ. ಉಳಿದವರಿಗಾಗಿ ಶೋಧನೆ ನಡೆಸುತ್ತಿದ್ದೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ಮಂಗಳವಾರ ಹೇಳಿದ್ದಾರೆ. 
ಹಾಗೆಯೇ ಈ ಸಂದರ್ಭದಲ್ಲಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದ ಏಳು ಪೋಲಿಸರ ಮೇಲೆಯೂ ಕ್ರಮ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ. 
ಪ್ರತ್ಯಕ್ಷದರ್ಶಿಗಳ ಪ್ರಕಾರ ೨೫೦ಕ್ಕೂ ಹೆಚ್ಚು ಜನರಿದ್ದ ಗುಂಪೊಂದು ಟ್ರಕ್ ನಲ್ಲಿದ್ದ ಜನರಿಗೆ ಥಳಿಸಿದ್ದಲ್ಲದೆ, ಟ್ರಕ್ ಗಳಿಗೆ ಬೆಂಕಿ ಹಚ್ಚಲು ಕೂಡ ಪ್ರಯತ್ನಿಸಿತ್ತು. 
ಟ್ರಕ್ ಚಾಲಕರು, ಕ್ಲೀನರ್ ಗಳು ಮತ್ತು ತಮಿಳು ಅಧಿಕಾರಿಗಳನ್ನು ದಾಳಿಕೋರರಿಂದ ರಕ್ಷಿಸಲು ಪೊಲೀಸರು ಹೆಣಗಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com