ಆಯ್ಕೆ ಪ್ರಕ್ರಿಯೆಗಳನ್ನು ಈಗಾಗಲೇ ನಾವು ಆರಂಭಿಸಿದ್ದೇವೆ. ಅಮಿತ್ ಶಾ ಹಾಗೂ ಜೇಟ್ಲಿಯವರೊಂದಿಗೆ ಮಾತುಕತೆ ನಡೆಸಲಾಗಿದೆ. ಪ್ರಸ್ತುತ ರಾಜನಾಥ ಸಿಂಗ್ ಅವರು ಮಿಜೋರಾಂನಲ್ಲಿದ್ದು, ಅವರೊಂದಿಗೂ ಸಮಾಲೋಚನೆ ನಡೆಸಿದ್ದೇವೆ. ಶೀಘ್ರದಲ್ಲಿಯೇ ಎಲ್ಲಾ ನಾಯಕರೊಂದಿಗೂ ಮಾತುಕತೆ ನಡೆಸಿ, ಇತರೆ ರಾಜಕೀಯ ಪಕ್ಷಗಳೊಂದಿಗೂ ಮಾತುಕತೆ ನಡೆಸುತ್ತೇವೆ. ಎಲ್ಲಾ ಸಹಕಾರ, ಬೆಂಬಲವನ್ನು ಪಡೆಯುತ್ತೇವೆಂದು ನಾಯ್ಡು ಅವರು ತಿಳಿಸಿದ್ದಾರೆ.