ಕೊಚ್ಚಿ ಮೆಟ್ರೋ ಉದ್ಘಾಟನೆ ವಿವಾದ: ನನಗೆ ಬೇಸರವಿಲ್ಲ, ಪ್ರಧಾನಿ ಮೋದಿ ಭದ್ರತೆ ಮುಖ್ಯ- ಶ್ರೀಧರನ್

ಕೊಚ್ಚಿ ಮೋಟ್ರೋ ಉದ್ಘಾಟನಾ ಸಮಾರಂಭದ ಗಣ್ಯರ ಪಟ್ಟಿಯಲ್ಲಿ ನನ್ನ ಹೆಸರಿಲ್ಲಿರುವುದಕ್ಕೆ ನನಗೆ ಯಾವುದೇ ರೀತಿಯ ನಿರಾಶೆಯಾಗಲೀ, ಬೇಸರವಾಗಲೀ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭದ್ರತೆಯ ಪ್ರಮುಖವಾದದ್ದು ಎಂದು ಮೆಟ್ರೋ...
ಮೆಟ್ರೋ ಮನುಷ್ಯ ಇ ಶ್ರೀಧರನ್
ಮೆಟ್ರೋ ಮನುಷ್ಯ ಇ ಶ್ರೀಧರನ್
Updated on
ಕೊಚ್ಚಿ: ಕೊಚ್ಚಿ ಮೋಟ್ರೋ ಉದ್ಘಾಟನಾ ಸಮಾರಂಭದ ಗಣ್ಯರ ಪಟ್ಟಿಯಲ್ಲಿ ನನ್ನ ಹೆಸರಿಲ್ಲಿರುವುದಕ್ಕೆ ನನಗೆ ಯಾವುದೇ ರೀತಿಯ ನಿರಾಶೆಯಾಗಲೀ, ಬೇಸರವಾಗಲೀ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭದ್ರತೆಯ ಪ್ರಮುಖವಾದದ್ದು ಎಂದು ಮೆಟ್ರೋ ಮನುಷ್ಯ ಇ ಶ್ರೀಧರನ್ ಅವರು ಹೇಳಿದ್ದಾರೆ. 
ಇ.ಶ್ರೀಧರನ್ ಅವರು ಕೊಚ್ಚಿ ಮೆಟ್ರೋ ಯೋಜನೆಯ ಪ್ರಧಾನ ಸಲಹೆಗಾರರಾಗಿದ್ದು, ಮೆಟ್ರೋ ಉದ್ಘಾಟನಾ ಸಮಾರಂಭದ ಗಣ್ಯರ ಪಟ್ಟಿಯಲ್ಲಿ ಶ್ರೀಧರನ್ ಅವರ ಹೆಸರು ಕಣ್ಮರೆಯಾಗಿರುವುದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. 
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಶ್ರೀಧರನ್ ಅವರು, ವಿಚಾರವನ್ನು ವಿವಾದ ಮಾಡಬೇಡಿ. ಪ್ರಧಾನಿ ಮೋದಿಯವರ ಭದ್ರತೆಯ ಪ್ರಮುಖವಾದದ್ದು. ಭದ್ರತಾ ಸಂಸ್ಥೆಗಳ ಅಧಿಕಾರಿಗಳು ನೀಡುವ ಸಲಹೆ, ಸೂಚನೆಗಳನ್ನು ಕೇಳಬೇಕು. ಪಟ್ಟಿಯಲ್ಲಿ ನನ್ನ ಹೆಸರಿಲ್ಲದಿರುವುಕ್ಕೆ ನನಗಾವುದೇ ಬೇಸವಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com