ಕಾರಿನ ಒಳಗೆ ಕುಳಿತು ಕಣ್ಣುಮುಚ್ಚಾಲೆ ಆಡುತ್ತಿರುವಾಗ ಈ ದಾರುಣ ಘಟನೆ ನಡೆದಿದೆ. ಬಹಳ ಹೊತ್ತಾದರೂ ಮನೆಯಲ್ಲಿ ಮಕ್ಕಳು ಕಾಣದಾದಾಗ ಅವರ ತಂದೆ ಹುಡುಕಾಟ ನಡೆಸಲು ಪ್ರಾರಂಭಿಸಿದ್ದಾರೆ. ಹೀಗಾಗಿ ಮಕ್ಕಳು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸೋಣ ಎಂದು ಕಾರು ಹತ್ತಲು ಹೋದಾಗ ಮಕ್ಕಳಿಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ.