ಪಾಕಿಸ್ತಾನದಲ್ಲಿ ಕೋಲಾಹಲ ಸೃಷ್ಟಿಸಿದ ಹಿಂದೂ ಯುವತಿಯ ಅಪಹರಣ, ಬಲವಂತದ ಮತಾಂತರ

ಪಾಕಿಸ್ತಾನದಲ್ಲಿ ಹಿಂದೂ ಯುವತಿಯನ್ನು ಅಪಹರಿಸಿ, ಬಲವಂತವಾಗಿ ಮತಾಂತರಗೊಳಿಸಿರುವ ಘಟನೆ ನಡೆದಿದ್ದು, ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪಾಕಿಸ್ತಾನ
ಪಾಕಿಸ್ತಾನ
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೂ ಯುವತಿಯನ್ನು ಅಪಹರಿಸಿ, ಬಲವಂತವಾಗಿ ಮತಾಂತರಗೊಳಿಸಿರುವ ಘಟನೆ ನಡೆದಿದ್ದು, ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. 
ಥಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ರವಿತಾ ಮೇಘವಾರ್ ಎಂಬ 16 ವರ್ಷದ ಬಾಲಕಿಯನ್ನು ಸ್ಥಳೀಯ ಸಯೀದ್ ಸಮುದಾಯದ ಪ್ರಭಾವಿ ಕುಟುಂಬದವರು ಅಪಹರಿಸಿ ಬಲವಂತವಾಗಿ ಮತಾಂತರ ಮಾಡಿದ್ದಾರೆ ಎಂದು ರವಿತಾ ಮೇಘವಾರ್ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. 
ಆದರೆ ಅಪಹರಣಕ್ಕೊಳಗಾಗಿ, ಬಲವಂತದ ಮತಾಂತರಕ್ಕೆ ಗುರಿಯಾಗಿದ್ದಾಳೆ ಎನ್ನಲಾಗುತ್ತಿರುವ ಬಾಲಕಿ ತಾನು ಸ್ವಇಚ್ಛೆಯಿಂದಲೇ ನವಾಜ್ ಅಲಿ ಶಾ ನನ್ನು ವಿವಾಹವಾಗಿರುವುದಾಗಿ ತಿಳಿಸಿದ್ದಾಳೆ, ಈ ಬಗ್ಗೆ ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡಿದ್ದು, ನನ್ನನ್ನು ಯಾರೂ ಅಪಹರಿಸಿಲ್ಲ. ಸ್ವೈಚ್ಛೆಯಿಂದಲೇ ಇಸ್ಲಾಂ ಗೆ ಮತಾಂತರಗೊಂಡಿದ್ದೇನೆ ಎಂದಿದ್ದಾಳೆ. ಅಷ್ಟೇ ಅಲ್ಲದೇ ತನಗೆ ಹಾಗೂ ತನ್ನ ಪತಿಗೆ ಭದ್ರತೆ ಒದಗಿಸಬೇಕೆಂಗೂ ಮನವಿ ಮಾಡಿಕೊಂಡಿದ್ದಾಳೆ.  ಈಕೆಗೆ ಮುಸ್ಲಿಂ ಧರ್ಮ ಗುರು ನೀಡಿರುವ ವಿವಾಹ ಪ್ರಮಾಣಪತ್ರದಲ್ಲಿ ಈಕೆಗೆ 18 ವರ್ಷವಾಗಿದ್ದು ಇಷ್ಟ ಬಂದವರನ್ನು ವಿವಾಹವಾಗಬಹುದು ಎಂದು ಹೇಳಿದ್ದಾರೆ.   
ಆದರೆ ಕುಟುಂಬ ಸದಸ್ಯರು ಯುವತಿಯ ಹೇಳಿಕೆಗೆ ತದ್ವಿರುದ್ಧ ಹೇಳಿಕೆ ನೀಡಿದ್ದು, ತಮಗೆ ನಿದ್ದೆ ಬರುವ ಮಾತ್ರೆ ನೀಡಿ ಯುವತಿಯನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಘಟನೆ ಸ್ಥಳೀಯ ಹಿಂದೂಗಳ ಆಕ್ರೋಶಕ್ಕೆ ಗುರಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com