ಆಹಾರ ವೈಯಕ್ತಿಕ ಆಯ್ಕೆ, ನಾನೇನು ತಿನ್ನಬೇಕೆಂದು ಯಾರೂ ಹೇಳಬೇಕಿಲ್ಲ: ನಾಯ್ಡು

ನಾನೊಬ್ಬ ಕಟ್ಟ ಮಾಂಸಹಾರಿಯಾಗಿದ್ದು, ನಾನು ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದೆಂಬುದನ್ನು ಯಾರೂ ಹೇಳಬೇಕಿಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ...
ಕೇಂದ್ರ ಸಚಿವ ವೆಂಕಯ್ಯ ನಾಯ್ಡು
ಕೇಂದ್ರ ಸಚಿವ ವೆಂಕಯ್ಯ ನಾಯ್ಡು
ನವದೆಹಲಿ: ನಾನೊಬ್ಬ ಕಟ್ಟ ಮಾಂಸಹಾರಿಯಾಗಿದ್ದು, ನಾನು ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದೆಂಬುದನ್ನು ಯಾರೂ ಹೇಳಬೇಕಿಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ. 
ಗೋಹತ್ಯೆ ನಿಷೇಧ ಕುರಿತಂತೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಕುರಿತಂತೆ ಭುಗಿಲೆದ್ದಿರುವ ವಿವಾದ ಕುರಿತಂತೆ ಆಕಾಶವಾಣಿ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿರುವ ಅವರು, ಗೋಹತ್ಯೆ ಕುರಿತಂತೆ ಕೆಲ ಮಾಧ್ಯಮಗಳು ಚರ್ಚೆಗಳನ್ನು ಆರಂಭಿಸಿವೆ. ಕೇಂದ್ರ ಸರ್ಕಾರ ಭಾರತವನ್ನು ಸಸ್ಯಹಾರಿ ರಾಷ್ಟ್ರವನ್ನಾಗಿ ಮಾರ್ಪಡಿಸಲು ಹೊರಡಿದೆಯೇ ಎಂಬುದರ ಬಗ್ಗೆಯೂ ಚರ್ಚೆ ನಡೆಸಿವೆ. ಗೋಹತ್ಯೆ ಕುರಿತಂತೆ ತಪ್ಪು ಮಾಹಿತಿಗಳನ್ನು ರವಾನಿಸಲಾಗುತ್ತಿದೆ ಎಂದು ಹೇಳಿದ್ದಾರೆ. 
ನಾನೊಬ್ಬ ಕಟ್ಟ ಮಾಂಸಹಾರಿಯಾಗಿದ್ದು, ನಾನೇನನ್ನು ತಿನ್ನಬೇಕೆಂಬುದನ್ನು ಯಾರೂ ಹೇಳಬೇಕಿಲ್ಲ. ಆಹಾರ ಅವರವರ ಆಯ್ಕೆಗೆ ಬಿಟ್ಟ ವಿಚಾರ. ಈ ವಿಚಾರ ಕುರಿತಂತೆ ಚರ್ಚೆ ಏಕೆ ಬೇಕು? ಎಂದು ಪ್ರಶ್ನಿಸಿದ್ದಾರೆ. 
ಎನ್ ಡಿಟಿವಿ ಸ್ಥಾಪಕ ಪ್ರಣಯ್ ರಾಯ್ ಅವರ ಮನೆ ಹಾಗೂ ಕಚೇರಿ ಮೇಲೆ ಸಿಬಿಐ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಮಾಧ್ಯಮದವರೆಂಬ ಕಾರಣಕ್ಕೆ ಯಾರಿಗೂ ವಿನಾಯಿತಿ ನೀಡಲು ಸಾಧ್ಯವಿಲ್ಲ. ನಿಯಮಗಳನ್ನು ಎಲ್ಲರೂ ಪಾಲನೆ ಮಾಡಬೇಕೆಂಬುದನ್ನು ನಾವು ಹೇಳುತ್ತಿದ್ದೇವೆ. 1975ರ ತುರ್ತು ಸಮಯದಲ್ಲಷ್ಟೇ ಮಾಧ್ಯಮದವರ ಮೇಲೆ ದೌರ್ಜನ್ಯೆ ನಡೆಸಲಾಗಿತ್ತು. ತಪ್ಪು ಆರೋಪಗಳನ್ನು ಹೊರಿಸಿ ಜೈಲಿಗಟ್ಟಲಾಗಿತ್ತು. ಪ್ರಸ್ತುತ ಆಗಿರುವುದನ್ನು ವಾಕ್ ಸ್ವಾತಂತ್ರ್ಯಕ್ಕೆ ಹೋಲಿಕೆ ಮಾಡುವಂತಿಲ್ಲ. ಸ್ವತಂತ್ರ ಮಾಧ್ಯಮ ಹಾಗೂ ವಾಕ್ ಸ್ವಾತಂತ್ರ್ಯದ ಮೇಲೆ ಸರ್ಕಾರ ನಂಬಿಕೆಯಿಟ್ಟಿದೆ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಕಾಶ್ಮೀರದ ಶೈಕ್ಷಣಿಕ ಸಂಸ್ಥೆಗಳಲ್ಲಿ ದೇಶ ವಿರೋಧಿ ಘೋಷಣೆ ಕೂಗಿರುವುದರ ಕುರಿತಂತೆ ಮಾತನಾಡಿದ ಅವರು, ಕೆಲ ಸಮಾಜಘಾತುಕ ಶಕ್ತಿಗಳು ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿವೆ. ಇಂತಹ ಚಟುವಟಿಕೆಗಳಿಗೆ ಯಾವುದೇ ಕಾರಣಕ್ಕೂ ಆಸ್ಪದ ಕೊಡುವುದಿಲ್ಲ ಎಂದಿದ್ದಾರೆ. 
ಮಾಧ್ಯಮಗಳ ವರ್ತನೆ ಕುರಿತಂತೆ ಕಿಡಿಕಾಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಪ್ರತೀ ಸುದ್ದಿಗಳನ್ನೂ ಬ್ರೇಕಿಂಗ್ ನ್ಯೂಸ್ ಗಳೆಂದು ತೋರಿಸುತ್ತವೆ. ಅಗತ್ಯವಿರುವ ಸುದ್ದಿಗಳು ಬ್ರೇಕಿಂಗ್ ನ್ಯೂಸ್ ಆಗಿರುವುದಿಲ್ಲ. ಊಹಿಸಿರುವ, ಕಲ್ಪನೆ ಮಾಡಿರುವ ಸುದ್ದಿಗಳು ಬ್ರೇಕಿಂಗ್ ನ್ಯೂಸ್ ಆಗಿರುತ್ತವೆ. ಯಾವುದೇ ಸತ್ಯಾಂಶಗಳಿಲ್ಲದೆಯೇ ಅವುಗಳು ಸುದ್ದಿಯಾಗಿರುತ್ತವೆ. "ದೃಢೀಕರಣದೊಂದಿಗಿರುವ ಮಾಹಿತಿಯು" ಸಮಾಜದ ಸಮಾಜಘಾತುಕರರ ವಿರುದ್ಧ ಯುದ್ಧ ಸಾಮಾಗ್ರಿಯಾಗಿರುತ್ತದೆ. 
ಮಾಧ್ಯಮಗಳು ಸ್ಥಳೀಯ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಮಕ್ಕಳಿಗೆ ತಮ್ಮ ತಾಯಿನಾಡು ಭಾಷೆ ಹೆಚ್ಚಾಗಿ ಕಲಿಯುವಂತೆ ಮಾಡಬೇಕು. ಹಾಗೆಂದು ನಾವು ಇಂಗ್ಲೀಷ್ ಭಾಷೆಯ ವಿರುದ್ಧವಿಲ್ಲ. ಆದರೆ, ಮಕ್ಕಳು ಪರಭಾಷೆಗಿಂತಲೂ ತಮ್ಮ ತಾಯಿನಾಡು ಭಾಷೆಗೆ ಹೆಚ್ಚು ಹೊಂದಿಕೊಂಡಿರುತ್ತಾರೆ ಹಾಗಾಗಿ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com