ಡಾರ್ಜಿಲಿಂಗ್'ನಲ್ಲಿ ಮುಂದುವರೆದ ಹಿಂಸಾಚಾರ: ಪರಿಸ್ಥಿತಿ ಅವಲೋಕಿಸಿದ ರಾಜನಾಥ್ ಸಿಂಗ್

ಪ್ರತ್ಯೇಕ ಗೋರ್ಖಾ ರಾಜ್ಯಕ್ಕೆ ಆಗ್ರಹಿಸಿ ಡಾರ್ಜಿಲಿಂಗ್ ನಲ್ಲಿ ನಡೆಯುತ್ತಿರುವ ಹಿಂಸಾಚಾರ ಶನಿವಾರ ಕೂಡ ಮುಂದುವರೆದಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪಶ್ಚಿಮ ಬಂಗಾಳ...
ನವದೆಹಲಿ: ಪ್ರತ್ಯೇಕ ಗೋರ್ಖಾ ರಾಜ್ಯಕ್ಕೆ ಆಗ್ರಹಿಸಿ ಡಾರ್ಜಿಲಿಂಗ್ ನಲ್ಲಿ ನಡೆಯುತ್ತಿರುವ ಹಿಂಸಾಚಾರ ಶನಿವಾರ ಕೂಡ ಮುಂದುವರೆದಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪಶ್ಚಿಮ ಬಂಗಾಳ ಸರ್ಕಾರ ಶನಿವಾರ ವರದಿ ಸಲ್ಲಿಸಿದೆ. 
ಪ್ರತ್ಯೇಕ ಗೋರ್ಖಾ ರಾಜ್ಯಕ್ಕಾಗಿ ಆಗ್ರಹಿಸಿ ಗೋರ್ಖಾ ಜನಮುಖಿ ಮೋರ್ಚಾ ಸಂಘಟನೆ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕರೆ ನೀಡಿತ್ತು. ಪ್ರತಿಭಟನೆ ಇಂದಿಗೆ 6ನೇ ದಿನಕ್ಕೆ ಕಾಲಿಟ್ಟಿದೆ. 
ಇದರಂತೆ ಪರಿಸ್ಥಿತಿ ಕುರಿತಂತೆ ಪಶ್ಚಿಮ ಬಂಗಾಳ ಸರ್ಕಾರ ಗೃಹ ಸಚಿವ ರಾಜನಾಥ ಸಿಂಗ್ ಅವರಿಗೆ ವರದಿ ಸಲ್ಲಿಸಿದ್ದು, ಭದ್ರತೆ ಕುರಿತಂತೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಅವಲೋಕನೆ ನಡೆಸುತ್ತಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಜಿಜೆಎಂ ಮುಖ್ಯಸ್ಥ ಬಿಮಲ್ ಗುರುಂಗ್ ಕಚೇರಿಗೆ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com