ತಮಿಳುನಾಡಿನ ಐವರು ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ, ದೋಣಿ ವಶ

ತಮ್ಮ ಪ್ರಾದೇಶಿಕ ನೀರಿನಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ರಾಮೇಶ್ವರಂ: ತಮ್ಮ ಪ್ರಾದೇಶಿಕ ನೀರಿನಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ  ಶ್ರೀಲಂಕಾ ನೌಕಾಪಡೆ ಐದು ಮಂದಿ ತಮಿಳುನಾಡು ಮೀನುಗಾರರನ್ನು ಬಂಧಿಸಿ ಅವರ ದೋಣಿಗಳನ್ನು  ವಶಪಡಿಸಿಕೊಂಡಿದ್ದಾರೆ.
ಇಂದು ಬೆಳಗ್ಗೆ ಮಂಡಪಮ್ ನ ಮೀನುಗಾರರು ಸಮುದ್ರಕ್ಕೆ ಮೀನು ಹಿಡಿಯಲೆಂದು ಇಳಿದಿದ್ದರು. ಆಗ ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ಅವರನ್ನು ಸುತ್ತುವರಿದು ಹಿಡಿದು ಕಂಗೆಸಂತುರೈ ಬಂದರಿಗೆ ಕರೆದೊಯ್ದರು ಎಂದು ರಾಜ್ಯ ಮೀನುಗಾರಿಕೆ ಒಕ್ಕೂಟದ ಅಧ್ಯಕ್ಷ ಎನ್. ದೇವದೊಸ್ಸ್ ತಿಳಿಸಿದ್ದಾರೆ.
ನೆಡುಂತೀವು ಹತ್ತಿರ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದ 6 ಮಂದಿ ತಮಿಳುನಾಡಿನ ಮೀನುಗಾರರನ್ನು ಕಳೆದ ಮೇ 23ರಂದು ಬಂಧಿಸಲಾಗಿತ್ತು.
ಶ್ರೀಲಂಕಾ ವಶಪಡಿಸಿಕೊಂಡಿರುವ 135 ಮೀನುಗಾರಿಕೆ ದೋಣಿಗಳನ್ನು ಹಿಂಪಡೆಯಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಕೋರಿದ್ದರು. ಅಲ್ಲದೆ ಶ್ರೀಲಂಕಾದ ಬಂಧನದಲ್ಲಿರುವ 11 ಮಂದಿ ಮೀನುಗಾರರನ್ನು ಬಿಡುಗಡೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಕೂಡ ಮುಖ್ಯಮಂತ್ರಿ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com