ನವಜಾತ ಶಿಶು ಸತ್ತಿದೆಯೆಂದು ಆಸ್ಪತ್ರೆ ಘೋಷಣೆ: ಸಂಸ್ಕಾರದ ವೇಳೆ ಮಗು ಜೀವಂತ

ನವಜಾತ ಶಿಶು ಸತ್ತಿದೆ ಎಂದು ಆಸ್ಪತ್ರೆ ಸಿಬ್ಬಂದಿ ಘೋಷಿಸಿದ ಹಿನ್ನೆಲೆಯಲ್ಲಿ ಪೋಷಕರು ಸಂಸ್ಕಾರ ಮಾಡಲು ಮುಂದಾದರು. ಈ ವೇಳೆ ಮಗು ಜೀವಂತವಾಗಿರುವುದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ನವಜಾತ ಶಿಶು ಸತ್ತಿದೆ ಎಂದು ಆಸ್ಪತ್ರೆ ಸಿಬ್ಬಂದಿ ಘೋಷಿಸಿದ ಹಿನ್ನೆಲೆಯಲ್ಲಿ ಪೋಷಕರು ಸಂಸ್ಕಾರ ಮಾಡಲು ಮುಂದಾದರು. ಈ ವೇಳೆ ಮಗು ಜೀವಂತವಾಗಿರುವುದು ಕಂಡು ಬಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಕೇಂದ್ರ ಸರ್ಕಾರದ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಜನಿಸಿದ ಮಗು ಮಗು ಸಾವನ್ನಪ್ಪಿದೆ ಎಂದು ಸಿಬ್ಬಂದಿ  ಹೇಳಿದ್ದಾರೆ. ನಂತರ ಪೋಷಕರು ಮಗುವನ್ನು ಸಂಸ್ಕಾರ ಮಾಡಲು ತೆರಳಿದ್ದಾರೆ. ಈ ವೇಳೆ ಮಗು ಜೀವಂತವಾಗಿರುವುದು ಕಂಡು ಬಂದಿದೆ.
ಆದರೆ ಆಸ್ಪತ್ರೆಯಲ್ಲಿ ಅಂದು ಎರಡು ಶಿಶುಗಳು ಜನಿಸಿದ್ದು, ಒಂದು ಮಗು ಸತ್ತಿತ್ತು, ಹೀಗಾಗಿ ಸಿಬ್ಬಂದಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಪೋಲೀಸರು ಹೇಳಿದ್ದಾರೆ. 
ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಬಾದರಾಪುರ್ ನಿವಾಸಿಗೆ ಹೆರಿಗೆಯಾಗಿತ್ತು, ಮಗು ಉಸಿರಾಡುವುದನ್ನು ಗುರುತಿಸಲು ಸಿಬ್ಬಂದಿ ವಿಫಲರಾಗಿದ್ದರು, ಹೀಗಾಗಿ ಮಗು ಸಾವನ್ನಪ್ಪಿದೆ ಎಂದು ತಿಳಿದು ಅದರ ಶವವನ್ನು ಪ್ಯಾಕ್ ಮಾಡಿ, ಪೋಷಕರಿಗೆ ನೀಡಿದ್ದರು. ಕುಟುಂಬ ಸದಸ್ಯರು ಸಂಸ್ಕಾರ ಮಾಡಲು ತೆರಳಿದ್ದರು. 
ಈ ವೇಳೆ ರೋಹಿತ್ ಅವರ ಸಹೋದರಿ ಮಗುವಿನ ಚಲನ ವಲನ ಗುರುತಿಸಿದರು, ಕೂಡಲೇ  ಮಗುವಿನ ಮೇಲಿದ್ದ ಪ್ಯಾಕ್ ತೆರೆದಾಗ ಶಿಶು ಉಸಿರಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ, ಇದರಿಂದ ಆಘಾತಗೊಂಡ ಪೋಷಕರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com